ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಮಾಡಲಾಗಿದ್ದ ರಸ್ತೆ ನಾಲ್ಕೇ ತಿಂಗಳಲ್ಲಿ ಹಾಳಾಗಿದ್ದು ಇಟ್ಟಿಗೆ ತುಂಬಿದ ವಾಹನ ತೆರಳುತ್ತಿದ್ದ ವೇಳೆ ಕುಸಿದಿದ್ದು ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ಸಾರ್ವಜನಿಕರು ಹಡಿಶಾಪ ಹಾಕುತ್ತಿದ್ದಾರೆ.

ಬೆಳಗಾವಿ ನಗರದ ಪಾಂಗುಳಗಲ್ಲಿಯಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಸ್ಮಾರ್ಟ ಸಿಟಿ ಯೋಜನೆಯಡಿ ರಸ್ತೆ ಕಾಮಗಾರಿಯನ್ನು ಮಾಡಲಾಗಿತ್ತು. ಚಂದ್ರಪ್ರಭ ಜೈನಮಂದಿರದ ಎದುರಿಗೆ ಇದೇ ಮಾರ್ಗವಾಗಿ ಇಟ್ಟಿಗೆ ತುಂಬಿಕೊಂಡು ಸಾಗುತ್ತಿದ್ದ ವಾಹನವೊಂದು ತೆರಳುತ್ತಿದ್ದ ವೇಳೆ ರಸ್ತೆ ಇದ್ದಕ್ಕಿದ್ದಂತೆ ಕುಸಿದು, ಇಟ್ಟಿಗೆ ತುಂಬಿದ್ದ ವಾಹನ ಸಿಲುಕಿಕೊಂಡಿದೆ. ಇನ್ನು ಈ ವೇಳೆ ಈ ಮಾರ್ಗವಾಗಿ ತೆರಳಲು ಸಾರ್ವಜನಿಕರು ಪರದಾಡಬೇಕಾಯಿತು. ಈ ವೇಳೆ ಸ್ಮಾರ್ಟ ಸಿಟಿ ಯೋಜನೆಯಡಿ ಮಾಡಲಾಗಿದ್ದ ರಸ್ತೆ ನಾಲ್ಕೇ ತಿಂಗಳಲ್ಲಿ ಕುಸಿದಿದೆ. ಇನ್ನು ರಸ್ತೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿಯನ್ನು ಮಾಡಲಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.