ರಾಜ್ಯದಲ್ಲಿರುವ ಎಲ್ಲ ವಿಶೇಷಚೇತನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಬೆಳಗಾವಿ ನಗರದಲ್ಲಿ ವಿಶೇಷಚೇತನರಿಗಾಗಿಯೇ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು.

ನಗರದ ಸಮರ್ಥನಂ ಸಂಸ್ಥೆ ಹಾಗೂ ಜೀತೂ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ 25ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ನೀಡಲು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವು. ಈ ವೇಳೆ ಬೆಳಗಾವಿ, ಬಾಗಲಕೋಟ, ಧಾರವಾಡ, ವಿಜಯಪುರ ಮೊದಲಾದ ಜಿಲ್ಲೆಗಳಿಂದ ವಿಶೇಷ ಚೇತನರು ಈ ಉದ್ಯೋಗ ಮೇಳದಲ್ಲಿ ಭಾಗಿಯಾಗಿದ್ದರು.ಇನ್ನು ಈ ಕಾರ್ಯಕ್ರಮ ಕುರಿತಂತೆ ಮಾತನಾಡಿದ ಸಮರ್ಥನಂ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಮಹಾಂತೇಶ ಕಿವುಡಸಣ್ಣವರ್ ಮಾತನಾಡಿ, ಬೆಳಗಾವಿ ನಗರದಲ್ಲಿ ವಿಶೇಷ ಚೇತನರಿಗೆ ಉದ್ಯೋಗ ಸಿಗಲಿ ಎನ್ನುವ ಉದ್ದೇಶದಿಂದ ಸಮರ್ಥನಂ ಸಂಸ್ಥೆ ಹಾಗೂ ಜೀತೂ ಸಂಸ್ಥೆಗಳ ಸಹಯೋಗದಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಇನ್ನು ಈ ಉದ್ಯೋಗ ಮೇಳದಲ್ಲಿ 25ಕ್ಕೂ ಅಧಿಕ ಕಂಪನಿಗಳು ಉದ್ಯೋಗ ನೀಡಲು ಮುಂದೆಬಂದಿವೆ. ಇನ್ನು ಹಲವು ಜಿಲ್ಲೆಗಳ ಉದ್ಯೋಗಾಕಾಂಕ್ಷಿ ವಿಶೇಷ ಚೇತರೂ ಕೂಡ ಭಾಗಿಯಾಗಿದ್ದಾರೆ ಎಂದರು.
ಇನ್ನು ನಗರದಲ್ಲಿ ವಿಶೇಷ ಚೇತನರಿಗಾಗಿ ಹಮ್ಮಿಕೊಂಡಿದ್ದ ಈ ಉದ್ಯೋಗ ಮೇಳಕ್ಕೆ ಎಲ್ಲರಿಂದ ಶ್ಲ್ಯಾಘನೆ ವ್ಯಕ್ತವಾಯಿತು. ವಿಶೇಷ ಚೇತನರೂ ಕೂಡ ಈ ಮೂಲಕ ಮುಖ್ಯವಾಹಿನಿಗೆ ಬಂದು ಸ್ವತಂತ್ರ ಜೀವನ ನಡೆಸುವಂತಾಗಲಿ ಎನ್ನುವುದೇ ಎಲ್ಲರ ಆಶಯ.