ಬೆಳಗಾವಿಯಲ್ಲಿ ಮೈ ಕೊರೆಯುವ ಚಳಿಗೆ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮಾರ್ಕೆಟ್ ಪೆÇಲೀಸ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.

ಹೌದು ಬೆಳಗಾವಿಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ದಾಖಲೆ ಪ್ರಮಾಣದಲ್ಲಿ ಚಳಿ ಕಂಡು ಬಂದಿದೆ. ಹೀಗಾಗಿ ಮನೆಯಲ್ಲಿ ಇರುವವರೇ ಚಳಿಗೆ ಬೆಚ್ಚಿ ಬಿದ್ದಿ ಬಿದ್ದು ಹೊರಗೆ ಬರುತ್ತಿಲ್ಲ. ಇನ್ನು ಸಾಯಿ ಮಾರ್ಕೆಟ್ ಬಳಿ ಓರ್ವ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು. ಈತ ಚಳಿಯಲ್ಲಿ ಮಲಗಿಕೊಂಡು ಅತೀಯಾದ ಚಳಿಯಿಂದಲೇ ಪ್ರಾಣ ಬಿಟ್ಟಿದ್ದಾನಾ ಅಥವಾ ಬೇರೆ ಯಾವ ಕಾರಣದಿಂದ ಮೃತನಾಗಿದ್ದಾನಾ ಎಂಬುದು ಪೊಲೀಸರ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ. ಮೃತ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಶ್ರೀರಾಮಸೇನೆ ಹಿಂದುಸ್ತಾನ್ ಸಂಘಟನೆ ಪದಾಧಿಕಾರಿಗಳು ಈ ವ್ಯಕ್ತಿಯ ಮೃತ ದೇಹವನ್ನು ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಕುರಿತು ಮಾರ್ಕೆಟ್ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.