ಕುಂದಾನಗರಿ ಬೆಳಗಾವಿ ನಗರದಲ್ಲಿ ನೈಟ್ ಕಫ್ರ್ಯೂ ಹಿನ್ನೆಲೆ ಹೊಸ ವರ್ಷದ ಅಂಭ್ರಮಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನತೆ ಅತ್ಯಂತ ಸರಳವಾಗಿ ಹೊಸ ವರ್ಷವನ್ನು ಸ್ವಾಗತ ಮಾಡಿಕೊಂಡಿದ್ದಾರೆ.

ಒಮಿಕ್ರಾನ್ ಭೀತಿಯ ಹಿನ್ನೆಲೆ ಸರಕಾರ ಜನ ಸೇರದಂತೆ ಮುಂಜಾಗೃತಾ ಕ್ರಮವಾಗಿ ರಾಜ್ತಾದ್ಯಂತ ನೈಟ್ ಕಫ್ರ್ಯೂ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಡಿಸೆಂಬರ್ 31ರ ಮಧ್ಯರಾತ್ರಿ ಹೊಸ ವರ್ಷದ ಸಂಭ್ರಮಾಚರಣೆಗೆ ನೀರಸ ಪ್ರತಿಕ್ರಿಯೆ ಕಂಡುಬಂತು. ಇನ್ನು ನೈಟ್ ಕಫ್ರ್ಯೂ ಹಿನ್ನೆಲೆ ಹೊಸ ವರ್ಷದ ಸಂಭ್ರಮಾಚರಣೆ ಫರ್ಟಿ ಕೇವಲ ಊಟಕ್ಕμÉ್ಟೀ ಮಾತ್ರ ಸಿಮೀತವಾಗಿತ್ತು. ಹೊಸ ವಷಾಚರಣೆ ಹಿನ್ನೆಲೆ ಅದ್ಧೂರಿಯಾಗಿ ಪಾರ್ಟಿ ಮಾಡುತ್ತಿದ್ದ ಜನತೆ ಈ ಬಾರಿ ಅತ್ಯಂತ ಸರಳವಾಗಿ ಪಾರ್ಟಿ ಮಾಡಿದ್ದಾರೆ.
ಬೆಳಗಾವಿಯ ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಊಟ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಇನ್ನು ರಾಜ್ಯದಲ್ಲಿ ನೈಟ್ ಕಫ್ರ್ಯೂ ಹಿನ್ನೆಲೆ ಪಕ್ಕದ ಗೋವಾ ರಾಜ್ಯಕ್ಕೆ ಹೊಸ ವರ್ಷಾಚರಣೆಗೆ ಸಾಕಷ್ಟು ಜನ ತೆರಳಿದ್ದಾರೆ. ನೈಟ್ ಕಫ್ರ್ಯೂ ಎಫೆಕ್ಟ್‍ನಿಂದಾಗಿ ಬೆಳಗಾವಿ ನಗರದಲ್ಲಿ ಹೋಟೆಲ್ ಗಳು ಖಾಲಿ ಖಾಲಿಯಾಗಿವೆ. ಹಾಗಾಗಿ ಹೊಸ ವರ್ಷವನ್ನು ಗ್ರ್ಯಾಂಡ್ ಆಗಿ ಆಚರಿಸಲೇ ಬೇಕು ಎನ್ನುವ ಜನ ಗೋವಾದತ್ತ ಮುಖ ಮಾಡಿದ್ದಾರೆ.
ಇನ್ನು ಹೊಸ ವರ್ಷಾಚರಣೆ ಪ್ರಯುಕ್ತ ಬೆಳಗಾವಿಯ ಸಂಕಮ ಹೋಟೆಲ್ ನಲ್ಲಿ ಡೀಯರ್ ಪಾರ್ಟಿ ಅರೇಂಜ್ ಮಾಡಲಾಗಿತ್ತು. ನೈಟ್ ಕಫ್ರ್ಯೂ ಇರೋದ್ರಿಂದ 10 ಗಂಟೆಗೆ ಹೋಟೆಲ್ ಸರ್ವೀಸ್ ಕ್ಲೋಸ್ ಮಾಡಲಾಗಿತ್ತು. ಫ್ಯಾಮಿಲಿ ಸಮೇತ ನ್ಯೂಇಯರ್ ಪಾರ್ಟಿಗೆ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಬಂದಿದ್ರು. ಮಕ್ಕಳು, ಮಡದಿಯೊಂದಿಗೆ ಆಗಸಿದ್ದ ಜನತೆ ಸಿಂಪಲ್ ಆಗಿಯೇ ನ್ಯೂಇಯರ್ ಆಚರಿಸಿದರು.