ಬೆಳಗಾವಿ ನಗರದ ಹೊರವಲಯದಲ್ಲಿ ನಿರ್ಮಿಸಲಾದ ಜೈ ಕಿಸಾನ್ ಹೋಲ್ ಸೇಲ್ ತರಕಾರಿ ವ್ಯಾಪಾರಸ್ಥರ ಸಂಘಟನೆ ಬೆಳಗಾವಿ ವತಿಯಿಂದ ಜೈ ಕಿಸಾನ್ ಹೋಲ್ ಸೇಲ್ ತರಕಾರಿ ಮಾರುಕಟ್ಟೆ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ನಗರದ ಹೊರ ವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 4ರ ಪುಣಾ ಬೆಂಗಳೂರ ಹೈವೆ ಗೆ ಹೊಂದಿಕೊಂಡಿರುವ ಎಸ್ ಸಿ ಮೋಟರ್ಸ್ ಹತ್ತಿರ ನಿರ್ಮಿಸಲಾದ ನೂತನ ಮಾರ್ಕೆಟ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲಿದ್ದ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇನ್ನು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅಭಯ್ ಪಾಟೀಲ್, ಈ ಸಂಸ್ಥೆಯಿಂದ ವ್ಯಾಪಾರಸ್ಥರು ಹಾಗೂ ರೈತರಿಗೆ ಅನುಕೂಲವಾಗಲಿದೆ. ಹಾಗಾಗಿ ಈ ಮಾರುಕಟ್ಟೆಯನ್ನು ವಾಸ್ತುಪ್ರಕಾರ ಕಟ್ಟಡ ಮಾಡಲಾಗಿದೆ. ಹಾಗೂ ಸುಂದರವಾಗಿದೆ ಎಂದು ಕಟ್ಟಡ ನಿರ್ಮಾಣ ಕುರಿತ ಮಾಹಿತಿ ನೀಡಿದರು
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅನೀಲ್ ಬೆನಕೆ ಈ ಮಾರುಕಟ್ಟೆ ನಿರ್ಮಾಣ ಕಳೆದ ೧೮ ವರ್ಷಗಳಿಂದ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ೧೦ ಸಾವಿರ ಜನ ಭಾಜಿ ಮಾರುಕಟ್ಟೆಯ ಮೇಲೆ ಅವಲಂಬಿತರಾಗಿದ್ದಾರೆ. ಇನ್ನು ರೈತರ ಉದ್ಧಾರವೇ ಎಲ್ಲರ ಉದ್ಧಾರ. ಹಾಗಾಗಿ ಎಲ್ಲರೂ ರೈತರ ಅಭಿವೃದ್ಧಿಗಾಗಿ ಶ್ರಮಿಸಬೇಕು. ಹಾಗಾಗಿ ಎಲ್ಲರೂ ಒಗ್ಗಟ್ಟಾಗಿದ್ದೀರೆಂದು ಬಾಜಿ ಮಾರ್ಕೆಟ್ ಅಗಿದೆ. ಹಾಗಾಗಿ ಒಗ್ಗಟ್ಟಾಗಿ ರೈತರ ಅಭಿವೃದ್ಧಿಗೆ ದುಡಿಯಬೇಕು. ಇನ್ನು ಈ ವಾತಾವರಣದಲ್ಲಿ ಸ್ಚಚ್ಛತೆ ಕಾಪಾಡಬೇಕು. ಇನ್ನು ಸ್ವಚ್ಛತೆ ಇದ್ದಲ್ಲಿ ಮಾತ್ರ ಲಕ್ಷ್ಮೀ ಇರುತ್ತಾಳೆ. ಇನ್ನು ಈ ಮಾರುಕಟ್ಟೆಯಲ್ಲಿ ಕೋಲ್ಡ್ ಸ್ಟೊರೇಜ್ ವ್ಯವಸ್ಥೆ ಮಾಡಬೇಕು. ಇದರಿಂದ ರೈತರು ಬೆಳೆದ ಬೆಳೆಗಳನ್ನು ಕೆಡದಂತೆ ಸಂರಕ್ಷಿಸುವ ಕಾರ್ಯ ಮಾಡಬೇಕೆಂದು ಅಧ್ಯಕ್ಷ ದಿವಾಕರ್ ಪಾಟೀಲರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಉತ್ತರ ಶಾಸಕ ಅನೀಲ್ ಬೆನಕೆ, ದಕ್ಷಿಣ ಶಾಸಕ ಅಭಯ್ ಪಾಟೀಲ್, ಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಬುಡಾ ಸಧ್ಯಕ್ಷ ಸಂಜಯ್ ಬೆಳಗಾಂವಕರ್, ಹೈಕೋರ್ಟ್ ವಕೀಲರಾದ ರಾಮಚಂದ್ರ ಮಾಳಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಚೂನಪ್ಪ ಪೂಜಾರಿ, ಭಾರತೀಯ ಕೃಷಿಕ ಸಮಾಜ ಕರ್ನಾಟಕದ ಅಧ್ಯಕ್ಷ ಲಿಂಗರಾಜ ಪಾಟೀಲ್, ಜೈಕಿಸಾನ್ ತರಕಾರಿ ಮಾರುಕಟ್ಟೆ ಅಸೋಸಿಯೇಶನ್ ಅಧ್ಯಕ್ಷ ದಿವಾಕರ್ ಪಾಟೀಲ್, ಉಪಾಧ್ಯಕ್ಷ ಮೋಹನ್ ಮನ್ನೋಳ್ಕರ್, ಮಾರುಕಟ್ಟೆ ಅಸೋಸಿಯೇಶನ್ ನಿರ್ದೇಶಕರು, ಹಾಗೂ ವ್ಯಾಪಾರಸ್ಥರು ಉಪಸ್ಥಿತರಿದ್ದರು.