ಬೆಳಗಾವಿ ನಗರದ ಸಾರ್ವಜನಿಕರ ಗಮನಕ್ಕೆ ಹೆಸ್ಕಾಂನಿಂದ ವಿದ್ಯುತ್ ಲೈನ್ ನಿರ್ವಹಣಾ ಕಾರ್ಯ ಕೈಗೊಂಡಿರುವುದರಿಂದ ಭಾನುವಾರ ವಿದ್ಯುತ್ ಕಡಿತವಾಗಿತ್ತು. ಹೀಗಾಗಿ ಸೋಮವಾರ ಮತ್ತು ಮಂಗಳವಾರ ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಹೌದು ಹಿಂಡಲಗಾ ಪಂಪ್ ಹೌಸ್ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದರಿಂದ ಸೋಮವಾರ ಮತ್ತು ಮಂಗಳವಾರ ಎರಡು ದಿವಸ ಬೆಳಗಾವಿ ನಗರಕ್ಕೆ 24/7 ಪ್ರಾತ್ಯಕ್ಷಿಕ ವಲಯ ಸಹಿತ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗುತ್ತದೆ ಎಂದು ಎಲ್ & ಟಿ, ಮಹಾನಗರ ಪಾಲಿಕೆ ಮತ್ತು ಕೆಯುಐಡಿಎಫ್‍ಸಿ ಮಾಹಿತಿ ನೀಡಿದೆ.