Belagavi

ಬೆಳಗಾವಿಯಲ್ಲಿ ಖಾಸಗಿ ಎಪಿಎಂಸಿಗೆ ರೈತರು ವ್ಯಾಪಾರಸ್ಥರ ತೀವ್ರ ವಿರೋಧ

Share

ಬೆಳಗಾವಿ ನಗರದಲ್ಲಿ ಖಾಸಗಿ ಭಾಜಿ ಮಾರ್ಕೆಟ್‍ಗೆ ಅನುಮತಿ ನೀಡಿದ ಎಪಿಎಂಸಿ ಅಧಿಕಾರಿಗಳ ನಡೆಯನ್ನು ಪ್ರಶ್ನಿಸಿ ವಿವಿಧ ರೈತಪರ ಸಂಘಟನೆಗಳ ನಾಯಕರು ಹಾಗೂ ರೈತ ಮುಖಂಡರು ಸುದ್ದಿಗೋಷ್ಠಿಯನ್ನು ನಡೆಸಿದರು.

ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವ್ಯಾಪಾರಿ ಮುಖಂಡರು, ಸರಕಾರಿ ಆದೇಶದಂತೆ ಈಗಾಗಲೇ ಎಪಿಎಂಸಿ ನಮಗೆ ವಾರ್ಷಿಕ ಲೀಸ್ ಮೇಲೆ 132 ಅಂಗಡಿಗಳನ್ನು 20 ಲಕ್ಷದಿಂದ 1ಕೋಟಿ 5ಲಕ್ಷದವರೆಗೆ ಲೀಸ್ ಮೇಲೆ ವ್ಯಾಪಾರ ಮಾಡಲು ಅವಕಾಶ ನೀಡಿದೆ. ಅದರಂತೆ ವ್ಯಾಪಾರ ಮಾಡುತ್ತಿದ್ದೇವೆ. ಆದರೆ ಈಗ ಇದ್ದಕ್ಕಿಂದ್ದಂತೆ ಖಾಸಗಿ ಎಪಿಎಂಸಿಗೆ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಹಾಗಾಗಿ ಸರಕಾರಿ ಎಪಿಎಂಸಿಗಳಲ್ಲಿ ವ್ಯಪಾರ ನಡೆಸುವ ವ್ಯಾಪಾರಸ್ಥರಿಗೆ ಹಾಗೂ ರೈತರಿಗೆ ಅನಾನುಕೂಲವಾಗಿದೆ. ಈ ಕೂಡಲೇ ಖಾಸಗಿ ಎಪಿಎಂಸಿ ಲೈಸೆನ್ಸ್‍ನ್ನು ರದ್ದುಗೊಳಿಸಿ ಸರಕಾರಿ ಎಪಿಎಂಸಿಯಲ್ಲಿಯೇ ವ್ಯಾಪಾರ ವಹಿವಾಟು ನಡೆಯಬೇಕೆಂದು ಈ ವೇಳೆ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷರಾದ ಸಿದಗೌಡ ಮೋದಗಿರವರು, ಸರಕಾರಿ ಎಪಿಎಂಸಿಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಸರಕಾರ 135 ಅಂಗಡಿಗಳನ್ನು ನಿರ್ಮಾಣ ಮಾಡುವ ಮೂಲಕ ವ್ಯಪಾರಸ್ಥರಿಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ ಈಗ ಮತ್ತೆ ನಗರದಲ್ಲಿ ಖಾಸಗಿ ಎಪಿಎಂಸಿ ಕಟ್ಟಡವನ್ನು ನಿರ್ಮಾಣ ಮಾಡುವಲ್ಲಿ ಸರಕಾರದ ನಿರ್ದೇಶಕ ಕರಿಗೌಡ ಮುತುವರ್ಜಿ ವಹಿಸಿದ್ದಾರೆ. ಹಾಗಾಗಿ ಈ ಕುರಿತಂತೆ ಸರಕಾರಿ ಅಧಿಕಾರಿಗಳು ತಪ್ಪು ಮಾಹಿತಿಯನ್ನು ಸರಕಾರಕ್ಕೆ ನೀಡಿದ್ದಾರೆ. ಇನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಖಾಸಗಿ ಎಪಿಎಂಸಿಗೆ ಅನುಮತಿ ನೀಡಬಾರದೆಂದು ಠರಾವು ಮಾಡಿಕೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲಾಗಿತ್ತು. ಆದರೆ ಈಗ ಅಧಿಕಾರಿಳು ಸರಖಾರಕ್ಕೆ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಹಾಗಾಗಿ ಇಲ್ಲಿ ನಡೆದಂತೆ ಪ್ರಮಾದಗಳಿಗೆ ಬೆಳಗಾವಿಯ ಉಪ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಎಪಿಎಂಸಿ ಕಮೀಟಿಯೇ ಇದಕ್ಕೆ ಕಾರಣ. ಮೂಲಭ ಸೌಲಭ್ಯಗಳನ್ನು ಕೊರತೆಯನ್ನು ತೋರಿಸಿ ಸರಕಾರಿ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಸರಕಾರಕ್ಕೆ ತಪ್ಪು ಮಾಹಿತಿಯನ್ನು ನೀಡಿ ಖಾಸಗಿ ಎಪಿಎಮ್‍ಸಿ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ನಾವು ರೈತರಿಗೆ ಒಳ್ಳೆಯದಾಗುವ ದೃಷ್ಟಿಯಿಂದ ನಾವು ಕಾನೂನು ಹೋರಾಟಕ್ಕೆ ಸಿದ್ದರಿದ್ದೇವೆ ಎಂದರು.

ಈ ವೇಳೆ ಮಾತನಾಡಿದ ಎಪಿಎಂಸಿ ಅಧಿಕಾರಿಗಳು, 2014ರ ಎಪಿಎಂಸಿ ಕಾಯ್ದೆಗೆ ತಿದುಪಡಿ ಮಾಡಲಾಗಿದೆ. ಈ ಮೂಲಕ ಖಾಸಗಿ ಎಪಿಎಂಸಿಗಳ ತೆರೆಯಲು ನಿಯಮಬದ್ಧವಾಗಿ 87/ಸಿ ಅಡಿ ಅವಕಾಶ ನೀಡಲಾಗಿದೆ. ಇನ್ನು ಬೆಳಗಾವಿ ನಗರದಲ್ಲಿ ಎರಡು ಪ್ರಮುಖ ವ್ಯಾಪಾರಿ ಸಂಘಟನೆಗಳಿದ್ದು ಇಬ್ಬರೂ ಸಮಸ್ಯೆ ಬಂದಾಗ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಇಬ್ಬರಿಗೂ ಹೊಂದಾಣಿಕೆಯಿಂದ ವ್ಯಾಪಾಯ ಮಾಡುವಂತೆ ಹೇಳಲಾಗಿತ್ತು. ಇನ್ನು ಈ ಎಪಿಎಂಸಿಗಳಿಗೆ ಲೈಸೆನ್ಸ್ ನೀಡುವ ಅಧಿಕಾರ ನಮ್ಮ ನಿರ್ದೇಶಕರಿಗೆ ಇರುವುದರಿಂದ ಅವರು ನಿರ್ದೇಶಕರಿಗೆ ಅರ್ಜಿ ಹಾಕಿ ಅನುಮತಿಯನ್ನು ಪಡೆದುಕೊಂಡಿದ್ದಾರೆ ಎಂದರು.

ಇನ್ನು ಬೆಳಗಾವಿ ನಗರದಲ್ಲಿ ಸರಕಾರಿ ಎಪಿಎಂಸಿ ಇದ್ದಾಗಲೂ ಖಾಸಗಿ ಎಪಿಎಂಸಿಗೆ ಅನುಮತಿ ನೀಡುವ ಅಗತ್ಯತೆ ಏನಿತ್ತು ಎಂದು ರೈತಮುಖಂಡರು ಹಾಗೂ ವ್ಯಾಪಾರಿಗಳು ಪ್ರಶ್ನೆ ಮಾಡಿದ್ದಾರೆ. ಇನ್ನು ಅಧಿಕಾರಿಗಳು ಕಾನೂನಿನಡಿಯಲ್ಲಿ ಅದಕ್ಕೆ ಅವಕಾಶವಿದ್ದು ಸರಕಾರದಿಂದಲೇ ನೇರವಾಗಿ ಅನುಮತಿ ಪಡೆದು ಎಪಿಎಂಸಿ ನಿರ್ಮಾಣ ಮಾಡಿದ್ದಾರೆ ಎನ್ನುತ್ತಿದ್ದಾರೆ, ಇನ್ನು ಈ ಕುರಿತು ಸರಕಾರ ಮುಂದೆ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.

Tags:

error: Content is protected !!