Belagavi

ಬೆಳಗಾವಿಯಲ್ಲಿ ಒಳಚರಂಡಿಗೆ ಸಿಲುಕಿ ನಾಲ್ಕು ದಿನ ಯಮಯಾತನೆ ಅನುಭವಿಸಿದ ಆಕಳು ಕರು

Share

ಕಿರಿದಾದ ಒಳಚರಂಡಿಯಲ್ಲಿ ಸಿಲುಕಿದ ಆಕಳು ಕರುವೊಂದು ನಾಲ್ಕು ದಿಗಳ ಕಾಲ ಒಳಚರಂಡಿಯಲ್ಲಿಯೇ ಒದ್ದಾಡಿ ನರಕಯಾತನೆಯನ್ನು ಅನುಭವಿಸಿದ ಮನಕಲಕುವ ಘಟನೆ ಬೆಳಗಾವಿಯ ಕುವೆಂಪುನಗರದಲ್ಲಿ ನಡೆದಿದೆ.

ಅದು ಬೆಳಗಾವಿಯ ಕುವೆಂಪು ನಗರ. ಅಲ್ಲಿನ ಕಿರಿದಾರ ಒಳ ಚರಂಡಿಯೊಂದರಲ್ಲಿ, ಅದು ಹೇಗೋ ಆ ಆಕಳು ಕಂದಮ್ಮ ಸೇರಿಕೊಂಡುಬಿಟ್ಟಿತ್ತು. ಆದರೆ ಆ ಪುಟ್ಟ ಕರುವನ್ನು ಯಾರೂ ಗಮನಿಸದ ಹಿನ್ನೆಲೆ ಕಿರಿದಾದ ಒಳಚರಂಡಿಯಲ್ಲಿಯೇ ಸಿಲುಕಿಹಾಕಿಕೊಂಡು ನಾಲ್ಕು ದಿನಗಳ ಕಾಲ ನರಕ ಯಾತನೆಯನ್ನು ಅನುಭವಿಸಿದೆ. ಅದೃಷ್ಟವಶಾತ್ ಅದರ ಕೂಗು ಆ ಭಗವಂತನಿಗೆ ಕೇಳಿಸಿತೋ ಏನೋ… ಕೊನೆಗೂ ಅದು ಹೇಗೋ ಆ ಆಕಳು ಕರುವನ್ನು ದಾರಿಹೋಕರು ಗಮನಿಸಿದ್ರು. ಅಯ್ಯೋ ಪಾಪ… ಆಕಳು ಕರು ಚರಂಡಿಯೊಳಕ್ಕೆ ಸೇರಿಕೊಂಡು ಹೊರಬರಲಾರದೆ ಒದ್ದಾಡುತ್ತಿದೆ ಎಂದು ಅಲ್ಲಿನ ಅಕ್ಕಪಕ್ಕದ ಮನೆಯವರಿಗೆ ಹೇಳಿದ್ದಾರೆ.

ಇನ್ನು ಅಕ್ಕಪಕ್ಕದ ಸಾರ್ವಜನಿಕರು ಕೂಡಲೇ ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ, ಅಗ್ನಿಶಾಮಕದಳ, ಹಾಗೂ ಪಾಲಿಕೆ ಸಿಬ್ಬಂದಿ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಆಕಳು ಕರುವನ್ನು ರಕ್ಷಿಸಿದ್ದಾರೆ. ಈ ವೇಳೆ ಅದರ ಪರೀಸ್ಥಿತಿಯನ್ನು ಕಂಡ ಅಕ್ಕಪಕ್ಕದ ಮನೆಯವರು ಮನೆಯ ಮಕ್ಕಳಿಗೆ ನೀಡುವಂತೆ ಬೆಲ್ಲ ಬಾಳೆ ಹಣ್ಣು, ಚಪಾತಿ ನೀಡಿ ಉಪಚರಿಸಿದ್ದಾರೆ.

ಇನ್ನು ಆಕಳು ಕರುವನ್ನು ಹೊರತೆಗೆಯುತ್ತಿದ್ದಂತೆ ಕರುವಿನ ಪರಿಸ್ಥಿತಿ ಚಿಂತಾಜನಕವಾಗಿತ್ತು. ನಾಲ್ಕು ದಿನಗಳ ಕಾಲ ಆಹಾರ ನೀರು ಇಲ್ಲದೇ ನರಕಯಾತನೆ ಅನುಭವಿಸಿದ್ದ ಪುಟ್ಟ ಕರು, ಎದ್ದು ನಿಲ್ಲಲೂ ಕೂಡ ಸಾಧ್ಯವಾಗುತ್ತಿರಲಿಲ್ಲ. ಸ್ಥಳೀಯರೇ ಎತ್ತಿಕೊಂಡು ಹೋಗಿ ಪಕ್ಕದಲ್ಲಿ ಮಲಗಿಸಿ ಅದಕ್ಕೆ ಆಹಾರ ನೀರಿನ ವ್ಯವಸ್ಥೆ ಮಾಡಿದ್ದಾರೆ. ಆದರೂ ಮೇಲೇಳಲಾಗದೇ ಕರು ಸುಮ್ಮನೇ ಮಲಗಿಕೊಂಡಿತ್ತು. ಇನ್ನು ಸ್ಥಳೀಯರೇ ಪಶು ವೈದ್ಯಾಧಿಕಾರಿಗಳನ್ನು ಕರೆಸಿ ಅದಕ್ಕೆ ಚಿಕಿತ್ಸೆ ಕೊಡಿಸಿದ್ದಾರೆ.

ಆಕಳನ್ನು ನಾವು ಗೋಮಾತೆ ಅಂತೀವಿ. ಅದನ್ನು ಪೂಜ್ಯ ಭಾವನೆಯಿಂದ ಗೌರವಿಸುತ್ತೇವೆ. ಇಂಥಹ ಆಕಳು ಕಂದಮ್ಮ ಚರಂಡಿಯೊಳಕ್ಕೆ ಸೇರಿ ನರಕೆ ಯಾತನೆಯನ್ನು ಕೇಳಿ ಸಾರ್ವಜನಿಕರು ಮಮ್ಮಲ ಮರುಗಿದ್ದಾರೆ.
ಇನ್ ನ್ಯೂಸ್ ಬೆಳಗಾವಿ

 

Tags:

error: Content is protected !!