ಬೆಳಗಾವಿ ನಗರದಲ್ಲಿ ಇಂದು ಎರಡು ದಿನಗಳ ಕಾಲ ನಡೆಯಲಿರುವ ಬೆಳಗಾವಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನೆರವೇರಿತು.

ಬೆಳಗಾವಿ ನಗರದ ಜಿಲ್ಲಾಪೊಲೀಸ್ ಕವಾಯತ್ ಮೈದಾನದಲ್ಲಿ ಇಂದು ದಿನಾಂಕ 4ರಿಂದ 6ರ ವರೆಗೆ ನಡೆಯಲಿರುವ ಬೆಳಗಾವಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯಿತು.ಈ ವೇಳೆ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಬಲೂನುಗಳನ್ನು ಆಗಸದೆತ್ತರಕ್ಕೆ ಹಾರಿ ಬಿಡುವ ಮೂಲಕ ಚಾಲನೆ ನೀಡಲಾಯಿತು. ಈ ವೇಳೆ ಪೊಲೀಸ್ ಇಲಖೆ ಸಿಬ್ಬಂದಿಯಿಂದ ಕವಾಯತ್‍ನ್ನು ನಡೆಸಲಾಯಿತು.
ಇನ್ನು ರ್ಕಾಕ್ರಮದ ಉದ್ಘಾಟನೆಯನ್ನು ನನೆರವೇರಿಸಿ ಮಾತನಾಡಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕರಿಸಿದ್ದಪ್ಪ, ಆನು ಪ್ರಧ್ಯಾಪಕ ವೃತ್ತಿಯೊಡನೆ ಹೆಚ್ಚಾಗಿ ಕ್ರೀಡಾ ಕೂಟಗಳಲ್ಲಿ ಭಾಗಿಯಾಗುತ್ತೇನೆ. ಕೆಲಸದಲ್ಲಿ ಶ್ರದ್ಧೆ ಹೊದಿರುವವರು ಮಾತ್ರ ಯಶಸ್ವಿಯಾಗಲು ಸಾಧ್ಯಬಾಗುತ್ತದೆ. ಕ್ರೀಡಾ ಕೂಟಗಳು ಕೇವಲ ಕ್ರೀಡಾಕೂಟಗಳಾಗದೇ ಅವು ಸಂಬಂಧಗಳನ್ನು ಬೆಸೆಯುತ್ತವೆ.
ಇನ್ನು ಒಬ್ಬರಿಗೊಬ್ಬರು ಪರಿಚಯವಾಗುವುದರಿಂದ ಮಾನಸಿಕ ಧೈರ್ಯ ವೃದ್ಧಿಯಾಗುತ್ತದೆ ಎಂದು ಹೇಳುವ ಮೂಲಕ ಕೊರೊನಾ ಸಮಯದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಯ ಕಾರ್ಯವನ್ನು ಸ್ಮರಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ್ ನಿಂಬರಗಿ, ಅಧಿಕಾರಿವರ್ಗ ಹಾಗೂ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.