ಆ ಭಾಗದ ಜನರ ಧ್ವನಿಯಾಗಿ ನಾವು ಈಗಾಗಲೇ ಕೆಲಸ ಮಾಡುತ್ತಿದ್ದೇವೆ. ನಾವು ಈ ರೀತಿ ಕೆಲಸ ಮಾಡಿದ್ದೇವೆ ನೀವೆನು ಮಾಡಿದ್ದೀರಿ ಹೇಳ್ರಪ್ಪಾ. ಇಲ್ಲಿ ಬಂದು ಗಲಾಟೆ ಮಾಡುವುದಲ್ಲ, ಪುಂಡಾಟಿಕೆ ಮಾಡುವುದಲ್ಲ ಅಂತಾ ಕೇಳಿದೀವಿ. ಇದನ್ನ ಸಹಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ ಎಂದು ಡಿಕೆ ಬ್ರದರ್ಸ ವೇಳೆ ವಿರುದ್ಧ ಸಚಿವ ಡಾ.ಅಶ್ವತ್ಥನಾರಾಯಣ ವಾಗ್ದಾಳಿ ಮಾಡಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡುತ್ತಿದ್ದ ವೇಳೆ ರಾಮನಗರದಲ್ಲಿ ನಡೆದ ಘಟನೆ ವಿರುದ್ಧ ಸಚಿವ ಅಶ್ವತ್ಥನಾರಾಯಣ ತೀವ್ರ ಅಸಮಾಧಾನ ಹೊರ ಹಾಕಿದರು. ಅವರು ಮನ ಬಂದಂತೆ ನಡೆದುಕೊಂಡು ಬಂದಿದ್ದಾರೆ. ಎನೂ ಮಾಡಿದ್ರೂ ನಾವು ಜಯಸಿಕೊಳ್ಳುತ್ತೇವೆ ಅನ್ನೋ ರೀತಿ ನಡೆದುಕೊಂಡಿದ್ದಾರೆ.
ಆ ತಾಳ್ಮೆಯನ್ನೆಲ್ಲ ನಮಗೆ ಮೀರಿಸಿದ್ದಾರೆ. ಒಂದು ಸ್ಪಷ್ಟ ಸಂದೇಶವನ್ನ ಕೊಡಬೇಕಾಗಿತ್ತು. ಕೇವಲ ನಿಮ್ಮ ವರ್ಚಸ್ಸು, ಪ್ರತಿಷ್ಠೆ, ಸ್ವಾರ್ಥಕ್ಕೆ ಆಧ್ಯತೆ ಕೊಟ್ಟು ಬದುಕಿ ಬಾಳುತ್ತಿದ್ದಂತವರು. ಇದು ಸಾಕಾಗಿದೆ, ನಿಮಗೆ ಸಾಧನೆ ಎನಾದ್ರೂ ಇದ್ರೇ ಕೆಲಸದಲ್ಲಿ ತೋರಿಸಬೇಕು. ನೀವು ಎನಾದ್ರೂ ಕೆಲಸ ಮಾಡಿದ್ದೀರಿ ಅಂತಾ ಕೇಳಿದ್ರೇ ಅವರಿಂದ ಉತ್ತರವಿಲ್ಲ ಎಂದು ತಿರುಗೇಟು ಕೊಟ್ಟರು
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಯಿಸಿದ ಏನೇನು ನಿರ್ಬಂಧ ಅವರ ಮೇಲೆ ಇದೆ ನೋಡೋಣ. ಈ ಕಾರ್ಯಕ್ರಮಗಳು ಒಟ್ಟಾರೆಯಾಗಿ ಸಮಾಜಕ್ಕೆ ಇವೆ. ಇದನ್ನು ಉಲ್ಲಂಘನೆ ಮಾಡ್ತೇವಿ ಅಂದ್ರೇ ಸರ್ಕಾರ ಎನೂ ಕ್ರಮ ವಹಿಸಬೇಕು ಅದನ್ನ ವಹಿಸುತ್ತೆ ಎಂದು ಸ್ಪಷ್ಟಪಡಿಸಿದರು.