Vijaypura

ಬುದ್ದೀಜಿಗೆ ಕೋಟಿ ಕೋಟಿ ಭಕ್ತರ ಹಾರೈಕೆ ಫಲ: ನಡೆದಾಡುವ ದೇವರು ಕ್ಷೇಮ, ಆತಂಕ ಪಡದಿರಲು‌ ಮನವಿ

Share

ನಡೆದಾಡುವ ದೇವರೆಂದೆ ಖ್ಯಾತಿ ಹೊಂದಿರುವ ಅಪಾರ ಭಕ್ತ ಗಣ ಹೊಂದಿ ಪೂಜ್ಯನೀಯರಾಗಿರು ವಿಜಯಪುರ ಜಿಲ್ಲೆಯ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ಮಂಗಳವಾರ ಸಂಜೆ ಪೂಜೆಗೆ ಮೊದಲು ಸ್ನಾನಕ್ಕೆಂದು ಬಚ್ಚಲುಮನೆಗೆ ಹೋದಾಗ ಶ್ರೀಗಳು ಕಾಲುಜಾರಿ ಬಿದ್ದು ಸ್ವಲ್ಪ ಪೆಟ್ಟಾಗಿತ್ತು. ಈ ಘಟನೆ ಭಕ್ತವೃಂಧಕ್ಕೆ ಆತಂಕ ಮೂಡಿಸಿತ್ತು.‌ಸಾವಿರಾರು ಭಕ್ತರು ಸೋಶಿಯಲ್ ಮಿಡಿಯಾದಲ್ಲಿ ಸ್ವಾಮೀಜಿಯವರು ಬೇಗನೇ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದರು.

ಈ ಕುರಿತು ಇನ್ ನ್ಯೂಜ್ ನ ವಿಜಯಪುರ ವರದಿಗಾರ ವಿಜಯಕುಮಾರ ಸಾರವಾಡ ಬುದ್ದೀಜಿ ಆಪ್ತರಲ್ಲಿ ಮಾಹಿತಿ ಕಲೆ ಹಾಕಿದಾಗ ಬುದ್ದೀಜಿಯವರ ಮಂಡಿಚಿಪ್ಪಿನ ಬಳಿ ಪುಟ್ಟ ಕೂದಲೆಳೆಯಷ್ಟು ಬಿರುಕು ಉಂಟಾಗಿದ್ದಲ್ಲದೇ ಬಲಗೈಗೆ ಸಣ್ಣ ಗಾಯವಾಗಿದೆ. ಯಾವುದೇ ರೀತಿಯ ಗಂಭೀರ ಗಾಯಗಳಾಗಲಿ, ಮೂಳೆ ಮುರಿತವಾಗಲಿ ಆಗಿಲ್ಲ ಎಂದು ಆಪ್ತರು ತಿಳಿಸಿದ್ದಾರೆ.

ಶ್ರೀಗಳ ಪರಮಾಪ್ತರಾದ ಕನ್ಹೇರಿ ಮಠದ ಸ್ವಾಮಿಗಳು, ಹರ್ಷಾನಂದ ಸ್ವಾಮಿಗಳು ಸಂಪೂರ್ಣ ಕಾಳಜಿಪೂರ್ವಕ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದು ಮೀರಜ್ ನ ಖ್ಯಾತ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕೆಲವೇ ದಿನಗಳ ವಿಶ್ರಾಂತಿ ನಂತರ ಶ್ರೀಗಳು ಮೊದಲಿನಂತೆ ಪ್ರವಚನಾಮೃತ ನೀಡಲಿದ್ದಾರೆ. ಕೋಟಿ ಕೋಟಿ ಭಕ್ತರ ಹಾರೈಕೆ ಶ್ರೀಗಳಿಗೆ ತಲುಪಿದೆ ಯಾರೂ ಆತಂಕಕ್ಕೊಳಗಾಗಬಾರದು ಎಂದು ಬುದ್ದೀಜಿ ಆಪ್ತರು ಭಕ್ತ ವೃಂಧಕ್ಕೆ ಇನ್ ನ್ಯೂಜ್ ಮೂಲಕ ಮನವಿ ಮಾಡಿದ್ದಾರೆ..

Tags:

error: Content is protected !!