ರಾಜ್ಯದಲ್ಲಿ ಕೊರೊನಾ 3 ನೇ ಅಲೆಯ ಓಮಿಕ್ರಾನ್ ಭೀತಿ ಹೆಚ್ಚಿದ್ದು, ಬಿಜೆಪಿ ಸರ್ಕಾರವೇ ಕೊರೊನಾ ಕಟ್ಟಿ ಹಾಕಲು ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಆದರೆ ಬಿಜೆಪಿಗರು ಪ್ರತಿಭಟನೆ ಗುಂಗಲ್ಲಿ ಮಾಸ್ಕ್ ಧರಿಸದೇ ಸಾಮಾಜಿಕ ಅಂತರವಿಲ್ಲದೇ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು, ಇಂದು ಸಂಸದ ಡಿ.ಕೆ.ಸುರೇಶ ಅವರ ವಿರುದ್ಧ ನಗರದ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ ಪ್ರತಿಭಟನಾ ಸಂದರ್ಭದಲ್ಲಿ ಬಿಜೆಪಿಗರೇ ಮಾಸ್ಕ್ ಧರಿಸದೇ ಇರುವಾಗ ಸಾಮಾನ್ಯ ಜನತೆ ಮಾಸ್ಕ್ ಧರಿಸದೇ ಇರುವ ಹಿನ್ನೆಲೆಯಲ್ಲಿ ದಂಡ ವಿಧಿಸುತ್ತಿದ್ದಾರೆ ಆದರೇ ಬಿಜೆಪಿಗರಿಗೆ ದಂಡ ವಿಧಿಸುವವರು ಯಾರು ಎಂಬುದು ಪ್ರಶ್ನೆಯಾಗಿದೆ.
ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜ್ಯ ಸರ್ಕಾರವೇ ಸೋಂಕು ಹೆಚ್ಚಾದಲ್ಲಿ ಲಾಕ್ ಡೌನ್ ಒಂದೇ ಅಸ್ತ್ರ ಎನ್ನುತ್ತಿದೆ. ಹೀಗಿರುವಾಗ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಬಿಜೆಪಿಗರೇ ಗುಂಪುಗಟ್ಟಲೇ ರಸ್ತೆಗಳಿದು ಪ್ರತಿಭಟನೆಗಿಳಿದರೇ ಕೊರೊನಾ ಹರಡುವಿಕೆ ಮತ್ತಷ್ಟು ಹೆಚ್ಚಾಗುವುದಿಲ್ಲವೇ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.