ರಾಜ್ಯದ ಬಿಜೆಪಿ ಪಕ್ಷದ ಕಾನೂನು ಪ್ರಕೋಷ್ಠ ಸಹ ಸಂಚಾಲಕರಾಗಿ ಜಿಲ್ಲೆಯ ಖ್ಯಾತ ನ್ಯಾಯವಾದಿ ವಿನೋದ ಪಾಟೀಲ ಇವರನ್ನು ಆಯ್ಕೆಮಾಡಿ ರಾಜ್ಯದ ಬಿಜೆಪಿ ಪಕ್ಷದ ಅಧ್ಯಕ್ಷ ನಳೀನಕುಮಾರ ಕಟೀಲ್ ಇವರು ಆದೇಶ ಹೊರಡಿಸಿದ್ದರಿಂದ ಕಾಗವಾಡದ ಮರಿಬಾಬಾ ಮಠ ಸಮಿತಿ ವತಿಯಿಂದ ಅದ್ಧೂರಿಯಾಗಿ ಸನ್ಮಾನಿಸಲಾಯಿತು.

ಇಂದು ಶುಕ್ರವಾರ ಸಂಜೆ ಕಾಗವಾಡದ ಮರಿಬಾಬಾ ಮಂದಿರದ ಆವರಣದಲ್ಲಿ ನ್ಯಾಯವಾದಿ ವಿನೋದ ಪಾಟೀಲ ಇವರನ್ನು ಮಠದ ಸಮಿತಿಯ ಅಧ್ಯಕ್ಷರು ಮತ್ತು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ನಾತಗೌಡ ಪಾಟೀಲ ಇವರ ನೇತೃತ್ವದಲ್ಲಿ ಅದ್ಧೂರಿವಾಗಿ ಸನ್ಮಾನಿಸಿ, ಸಂತಸ ಹಂಚಿಕೊಂಡರು.
ನ್ಯಾಯವಾದಿ ವಿನೋದ ಪಾಟೀಲ ಕಾಗವಾಡದ ಮರಿಬಾಬಾ ದೇವಸ್ಥಾನ ಸಮಿತಿಯ ಸದಸ್ಯರಿಗೆ ಧನ್ಯವಾದ ತಿಳಿಸಿ ಮಾತನಾಡುವಾಗ, ಕಳೆದ 15 ವರ್ಷಗಳಿಂದ ನ್ಯಾಯವಾದಿಯಾಗಿ ಜಿಲ್ಲಾ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದನ್ನು ರಾಜ್ಯದ ಮತ್ತು ಜಿಲ್ಲೆಯ ಬಿಜೆಪಿ ಪಕ್ಷದ ಮುಖಂಡರು ಸೇವೆ ಪರಿಗಣಿಸಿ ನನ್ನನ್ನು ಕರ್ನಾಟಕ ರಾಜ್ಯ ಬಿಜೆಪಿ ಪಕ್ಷದ ಕಾನೂನು ಪ್ರಕೋಷ್ಠ ಸಹ ಸಂಚಾಲಕರಾಗಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಇವರು ಆಯ್ಕೆಮಾಡಿ ಆದೇಶ ಹೊರಡಿಸಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ಪಕ್ಷವಾಗಿರುವ ಬಿಜೆಪಿ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಒಳ್ಳೆ ಸೇವೆ ನೀಡಲು ನಾನು ಬದ್ಧನಾಗಿದ್ದೇನೆಯೆಂದರು.
ನಿವೃತ್ತ ಪ್ರಾಚಾರ್ಯರು, ದೇವಸ್ಥಾನ ಸಮಿತಿಯ ಸಂಚಾಲಕ ಬಿ.ಜೆ.ಪಾಟೀಲ ಮಾತನಾಡುವಾಗ, ನ್ಯಾಯವಾದಿ ವಿನೋದ ಪಾಟೀಲ ಇವರು ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರು ಇವರ ಸೇವೆ ಗುರುತಿಸಿ ರಾಜ್ಯದ ಮುಖಂಡರು ಜವಾಬ್ದಾರಿ ನೀಡಿದ್ದಾರೆ. ಇವರ ಸೇವೆ ಜನಪರವಾಗಲಿಯೆಂದು ಹಾರೈಸಿ, ಇವರು ಮೂಲತಃ ಗೋಕಾಕ ತಾಲ್ಲೂಕಿನ ಮಮದಾಪುರ ಗ್ರಾಮದವರು, ಕಾಗವಾಡದ ಅಳಿಯನಾಗಿದ್ದಾರೆಯೆಂದು ಹೇಳಿದರು.
ಸನ್ಮಾನ ಸಮಾರಂಭದಲ್ಲಿ ಮರಿಬಾಬಾ ಮಠದ ಅಧ್ಯಕ್ಷ ನಾತಗೌಡ ಪಾಟೀಲ, ಉಪಾಧ್ಯಕ್ಷ ಶೇಖರ ಪಾಟೀಲ, ನಿವೃತ್ತ ಪ್ರಾಚಾರ್ಯರಾದ ಬಿ.ಜೆ.ಪಾಟೀಲ, ಸದಸ್ಯ ಕಾರ್ಯದರ್ಶಿ ಕುಮಾರ ಪಾಟೀಲ, ಸದಸ್ಯರಾದ ಶಶಿಕಾಂತ ಗುಮಟೆ, ರೋಹಿತ ಪಾಟೀಲ, ಬಾಳು ಪಾಟೀಲ, ಬಬನ ಕುಟವಾಡೆ, ಶಿವಾಜಿ ಗಾಯಕವಾಡ, ಈಶ್ವರ ಪಾಟೀಲ, ಸಂಭಾಜಿ ಗಾಯಕವಾಡ, ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.