ಸಂಗೊಳ್ಳಿ ರಾಯಣ್ಣ ಸೊಸೈಟಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಸೈಟಿ ಚೇರ್‍ಮೆನ್ ಆನಂದ ಅಪ್ಪುಗೋಳ್‍ರನ್ನು ಎಡಿ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಸಂಗೊಳ್ಳಿ ರಾಯಣ್ಣ ಸೊಸೈಟಿಯ ವಿವಿಧ ಬ್ರ್ಯಾಂಚ್ ಗಳಲ್ಲಿ ಗ್ರಾಹಕರಿಗೆ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗೊಳ್ಳಿ ರಾಯಣ್ಣ ಸೊಸೈಟಿ ಚೇರ್ಮನ್ ಆನಂದ ಅಪ್ಪುಗೊಳ ಬಂಧನವಾಗಿದೆ. ಸೊಸೈಟಿಯ ಗ್ರಾಹಕರಿಗೆ 250 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು, ಆನಂದ ಅಪ್ಪುಗೋಳ್‍ರನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.