Crime

ಬಸ್ ತಂಗುದಾಣದಲ್ಲಿ ಯುವಕನ ಬರ್ಬರ ಹತ್ಯೆ

Share

ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹಯತ್ಯ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಬಸವನ ಹಟ್ಟಿ ಕ್ರಾಸ್ ಬಳಿ ನಡೆದಿದೆ. ಬಸವನಬಾಗೇವಾಡಿ ನಿವಾಸಿ ಮುತ್ತು ದುಂಬಾಳಿ 27 ಹತ್ಯೆಗೀಡಾಸ ಯುವಕನಾಗಿದ್ದು ಮುದ್ದೇಬಿಹಾಳ ರಸ್ತೆಯ ಬಸವನ ಹಟ್ಟಿ ಕ್ರಾಸ್ ಬಳಿ ಇರುವ ಬಸ್ ತಂಗುದಾಣದಲ್ಲಿ ನಡೆದಿದೆ. ಕಲ್ಲಿನಿಂದ ತಲೆಗೆ ಬಲವಾಗಿ ಹೊಡೆದಿರುವ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾನೆ‌.

ಇಬ್ಬರು ಸೇರಿ ಮುತ್ತುನ ತಲೆಗೆ ಕಲ್ಲಿನಿಂದ ಜಜ್ಜಿ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಶನಿವಾರ ರಾತ್ರಿ ಸ್ನೇಹತರೊಂದಿಗೆ ಪಾರ್ಟಿ ಮಾಡಿದ್ದಾನೆ ನಂತರ ಯಾರ ಜೊತೆ ಹೊಗಿದ್ದ ಎನ್ನುವದು ಗೊತ್ತಾಗಿಲ್ಲಾ. ಭಾನುವಾರ ಬೆಳಿಗ್ಗೆ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಬಸವನಬಾಗೇವಾಡಿ ಸಿಪಿಐ ಬಸವರಾಜ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ದೂರು ದಾಖಲಾಗಿದೆ.

Tags:

error: Content is protected !!