Belagavi

ಬಚ್ಚನಕೇರಿ ಕ್ರಾಸ್‍ನಲ್ಲಿ ಮರೀಕಟ್ಟಿ ಗೌಂಡಿಯ ಬರ್ಬರ ಹತ್ಯೆ

Share

ಚನ್ನಮ್ಮ ಕಿತ್ತೂರು ಬಳಿಯ ಬಚ್ಚನಕೇರಿ ಕ್ರಾಸ್‍ನಲ್ಲಿ ಪತ್ತೆಯಾಗಿದ್ದ ಅಪರಿಚಿತ ಶವದ ಗುರುತು ಪತ್ತೆಯಾಗಿದ್ದು. ಬೈಲಹೊಂಗಲ ತಾಲೂಕಿನ ಮರೀಕಟ್ಟಿ ಗ್ರಾಮದ ರಮೇಶ್ ಮಾದಿಗರ(36) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಹೌದು ಕಿತ್ತೂರು ತಾಲೂಕಿನ ಬಚ್ಚನಕೇರಿ ಕ್ರಾಸ್ ಬಳಿ ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಈ ವೇಳೆ ಶವದ ಗುರುತು ಪತ್ತೆಯಾಗಿರಲಿಲ್ಲ. ಆದರೆ ಇದೀಗ ಮೃತ ವ್ಯಕ್ತಿಯ ಗುರುರು ಪತ್ತೆಯಾಗಿದ್ದು. ಮರೀಕಟ್ಟಿ ಗ್ರಾಮದ ರಮೇಶ್ ಮಾದಿಗರ(36) ಮೃತ ವ್ಯಕ್ತಿ ಎಂದು ದೃಢಪಟ್ಟಿದೆ. ಹಿರೇಬಾಗೇವಾಡಿಯಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡ್ತಿದ್ದ ಮೃತ ರಮೇಶ್, ಬುಧವಾರ ಕಿತ್ತೂರಲ್ಲಿ ಕೆಲಸ ಇದೆ ಎಂದು ಹೇಳಿ ಹೋಗಿದ್ದ, ಆದರೆ ನಿನ್ನೆ ಸಂಜೆ ಈತ ಕೊಲೆಯಾಗಿ ಮಲಗಿದ್ದ. ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಶವ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಹೆಚ್ಚುವರಿ ಜಿಲ್ಲಾ ಪೆÇಲೀಸ ವರಿμÁ್ಠಧಿಕಾರಿ ಮಹಾಲಿಂಗ ನಂದಗಾವಿ ಹಾಗೂ ಕಿತ್ತೂರು ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಹಂತಕರ ಶೋಧಕ್ಕೆ ಜಾಲ ಬಿಸಿದ್ದಾರೆ.ಮರಣೋತ್ತರ ಪರೀಕ್ಷೆಗಾಗಿ ಮೃತ ರಮೇಶ್ ಶವವನ್ನು ಬೆಳಗಾವಿಯ ಬಿಮ್ಸ ಆಸ್ಪತ್ರೆಗೆ ತೆಗೆದುಕೊಂಡು ಬರಲಾಗಿದೆ. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮೃತ ರಮೇಶ್ ತಂದೆ ನನ್ನ ಮಗ ಗೌಂಡಿ ಕೆಲಸ ಮಾಡುತ್ತಿದ್ದರು, ನಾನು ಕೂಲಿ ಕೆಲಸ ಮಾಡುತ್ತೇನೆ. ಏನು ಆಗಿದೆಯೋ ಗೊತ್ತಾಗುತ್ತಿಲ್ಲ. ಯಾರ ಜೊತೆಗೂ ಯಾವುದೇ ರೀತಿ ಜಗಳ ಇರಲಿಲ್ಲ. ನನ್ನ ಮಗನಿಗೆ ಮೂರು ಮಕ್ಕಳಿದ್ದಾರೆ ಎಂದು ತಮ್ಮ ನೋವು ತೋಡಿಕೊಂಡರು.

ಮೃತ ವ್ಯಕ್ತಿಯ ಸಂಬಂಧಿಕ ಭರಮಾ ಗೌಳಿ ಮಾತನಾಡಿ ಬುಧವಾರ ಕೆಲಸಕ್ಕೆ ಹೋಗಿದ್ದರು, ಮಧ್ಯಾಹ್ನ ಸ್ವಲ್ಪ ಕೆಲಸ ಇದೆ ಎಂದು ಕಿತ್ತೂರಿಗೆ ಬಸ್‍ಗೆ ಹೋಗಿದ್ದರು. ಹೋದವರು ಮರಳಿ ಬಂದಿರಲಿಲ್ಲ. ನಿನ್ನೆ ಸಾಯಂಕಾಲ ಅಲ್ಲಿಯವರು ಒಬ್ಬರು ಫೋನ್ ಮಾಡಿ ಶವವೊಂದು ಬಿದ್ದಿದೆ ಎಂದು ವಿಷಯ ತಿಳಿಸಿದಾಗ, ನಾವು ಅಲ್ಲಿ ಹೋಗಿ ನೋಡಿದಾಗ ನಮಗೆ ಗೊತ್ತಾಯಿತು ಎಂದರು.

ಒಟ್ಟಿನಲ್ಲಿ ಮರೀಕಟ್ಟಿ ಗ್ರಾಮದ ಗೌಂಡಿಯ ಬರ್ಬರ ಹತ್ಯೆಯಿಂದ ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ. ಇನ್ನು ಕಿತ್ತೂರು ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಏನೇ ಆಗಲಿ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಮನೆ ಯಜಮಾನನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದ್ದು ಮಾತ್ರ ದೊಡ್ಡ ದುರಂತರವೇ ಸರಿ.

Tags:

error: Content is protected !!