Belagavi

ಪೊಲೀಸರ ಬೆನ್ನು ಬಿಡದ ಕೊರೊನಾ: ಬೆಳಗಾವಿ ಜಿಲ್ಲೆಯಲ್ಲಿ 89 ಸಿಬ್ಬಂದಿಗೆ ಸೋಂಕು ದೃಢ

Share

ಬೆಳಗಾವಿ ಜಿಲ್ಲೆಯಲ್ಲಿ ಪೆÇಲೀಸರನ್ನು ಕೊರೊನಾ ಮಹಾಮಾರಿ ಬಿಟ್ಟು ಬಿಡದೇ ಕಾಡುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 89 ಪೊಲೀಸ್ ಸಿಬ್ಬಂದಿಗೆ ಕೊವಿಡ್ ಒಕ್ಕರಿಸಿಕೊಂಡಿದೆ.

ಹೌದು ಕೊವಿಡ್ ಮಹಾಮಾರಿ ಇಡೀ ರಾಜ್ಯಾದ್ಯಂತ ಹಬ್ಬುತ್ತಿದ್ದು ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯಲ್ಲೇ 39 ಜನ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಒಕ್ಕರಿಸಿಕೊಂಡಿದೆ. ಬೆಳಗಾವಿ ಎಪಿಎಂಸಿ ಠಾಣೆಯ 11 ಸಿಬ್ಬಂದಿ, ಶಹಾಪುರ ಠಾಣೆಯ ಮೂವರು ಸಿಬ್ಬಂದಿ, ಟಿಳಕವಾಡಿ ಪೆÇಲೀಸ್ ಠಾಣೆಯ ಇಬ್ಬರು ಸಿಬ್ಬಂದಿ, ಓರ್ವ ಇನ್ಸ್‍ಪೆಕ್ಟರ್, ಇಬ್ಬರು ಪಿಎಸ್‍ಐ ಸೇರಿ ಕಮಿಷನರೇಟ್ ವ್ಯಾಪ್ತಿಯಲ್ಲಿಯೇ ಒಟ್ಟು 39 ಸಿಬ್ಬಂದಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ಡಿಎಆರ್, ಸಿಎಆರ್, ಕೆಎಸ್ ಆರ್‍ಪಿ ಸೇರಿ ಒಟ್ಟಾರೆ 89 ಪೆÇಲೀಸ್ ಸಿಬ್ಬಂದಿಯಲ್ಲಿ ಕೋವಿಡ್ ಮಹಾಮಾರಿ ಪತ್ತೆಯಾಗಿದೆ.

Tags:

error: Content is protected !!