Belagavi

ನೇಗಿನಹಾಳ ಬಸವ ಕೇಂದ್ರದ ಶರಣರಿಂದ ವಚನ ತಾಡೋಲೆಗಳ ಡಿಜಟಲೀಕರಣ ಸೇವೆ

Share

ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದಲ್ಲಿ ವಚನ ತಾಡೋಲೆಗಳ ಡಿಜಟಲೀಕರಣ ಕಾರ್ಯ ಮುಂದುವರಿದಿದ್ದು, ಐದನೇ ದಿನವೂ ಅತ್ಯಂತ ಉತ್ಸಾಹದಿಂದ ಶರಣ ಬಾಂಧವರು ಡಿಜಿಟಲೀಕರಣ ಕಾರ್ಯದಲ್ಲಿ ಭಾಗಿಯಾಗಿದ್ದರು.

ಬೆಳಗಾವಿಯ ಶಿವಬಸವ ನಗರದಲ್ಲಿರುವ ವಚನ ಅಧ್ಯಯನ ಕೇಂದ್ರದಲ್ಲಿ ಜನವರಿ 11ರಿಂದ 20 ದಿನಗಳ ಕಾಲ ಅಶೋಕ್ ದೇಮನೂರು ಅವರ ನೇತೃತ್ವದಲ್ಲಿ ವಚನ ತಾಡೋಲೆಗಳ ಡಿಜಟಲೀಕರಣ ಕೆಲಸ ನಡೆಯುತ್ತಿದೆ. ಅದೇ ರೀತಿ ಶನಿವಾರ ನೇಗಿನಹಾಳ ಬಸವ ಕೇಂದ್ರದ ಶರಣ ಬಂಧುಗಳು ಆಗಮಿಸಿ ವಚನ ತಾಡೋಲೆಗಳ ಡಿಜಟಲೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಈ ವೇಳೆ ಮಾಜಿ ಜಿ.ಪಂ.ಸದಸ್ಯೆ ರೋಹಿಣಿ ಪಾಟೀಲ್, ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ರೊಟ್ಟಿ, ಅಶೋಕ ಮಳಗಲಿ, ಗ್ರಾ.ಪಂ.ಸದಸ್ಯೆ ಮಹಾದೇವಿ ಕೋಟಗಿ, ಈರಮ್ಮ ಮರಿತಮ್ಮನವರ, ಚನ್ನಮ್ಮ ಶಿಂತ್ರಿ, ದೀಪಾ ಮರಕುಂಬಿ, ಮಡಿವಾಳಪ್ಪ ಮರಿತಮ್ಮನವರ, ಶಿವು ಮೇಟ್ಯಾಲ್, ನಾಗರಾಜ್ ಕುಂಕುರ, ಮಹಾದೇವ ಮುದ್ದನ್ನವರ, ಬಸವರಾಜ್ ಕರಲೆಪ್ಪನವರ, ಶಂಕರ ಹಡಪದ, ಶಂಕರ ಪಟ್ಟೇದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Tags:

error: Content is protected !!