Kagawad

ನೀರು ಬಸಿಯುವಿಕೆಯ ಕಾಲುವೆ ಜೂನ್ ಅಂತ್ಯಕ್ಕೆ ದುರಸ್ತಿ: ಐನಾಪುರ ರೈತರಿಗೆ ಅಭಿಯಂತರ ಬಿ.ಆರ್ ರಾಠೋಡ್ ಭರವಸೆ

Share

ಐನಾಪುರ ಏತ ನೀರಾವರಿ ಯೋಜನೆಯ ನೀರು ಬಸಿಯುವಿಕೆಯ ಕಾಲುವೆ ಜೂನ್ ಕೊನೆಯವರೆಗೆ ದುರಸ್ತಿ ಮಾಡುತ್ತೇವೆ ಎಂದು ಅಧಿಕ್ಷಕ ಅಭಿಯಂತರರಾದ ಬಿ.ಆರ್ ರಾಠೋಡ್ ಭರವಸೆ ಕೊಟ್ಟಿದ್ದಾರೆ.

ಕಾಗವಾಡ ತಾಲೂಕಿನ ಐನಾಪುರ ಏತ ನೀರಾವರಿ ಯೋಜನೆಯ ಮೂಲಕ ರೈತರಿಗೆ ನೀರೋದಗಿಸುವ ಮೇಲು ಸೇತುವೆ ಸೋರುತ್ತಿರುವುದನ್ನು ಪ್ರತಿಭಟಿಸಿ ಮಂಗಳವಾರದಂದು ಐನಾಪುರದ ಕರ್ನಾಟಕ ನೀರಾವರಿ ನಿಗಮದ ಕಚೇರಿಗೆ ರೈತರು ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಆ ಹಿನ್ನೆಲೆಯಲ್ಲಿ ಬುಧವಾರ ಅಧಿಕ್ಷಕ ಅಭಿಯಂತರ ಬಿ.ಆರ್. ರಾಠೋಡ ಇಂದು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು. ನೀರಾವರಿ ಕಚೇರಿಯಲ್ಲಿ ಅಧಿಕ್ಷಕ ಅಭಿಯಂತರ ಬಿ.ಆರ್.ರಾಠೋಡ, ಅಭಿಯಂತರ ಕೆ.ರವಿ ಇವರು ರೈತರೊಂದಿಗೆ ಸಮಾಲೋಚನೆ ನಡೆಸಿದರು.

ಈ ವೇಳೆ ಮಾತನಾಡಿದ ಅರುಣ ಗಾಣಿಗೇರ ಅವರು ಕಳೆದ 12 ವರ್ಷಗಳಿಂದ ಯೋಜನೆ ಪ್ರಾರಂಭವಾಗಿದ್ದು ಆಗಿನಿಂದ ಈ ವರಗೆ ಪ್ರತಿವರ್ಷ ಜೂನದಿಂದ ಅಕ್ಟೋಬರ ಕೊನೆಯವರೆಗೆ ಕಾಲುವೆ ಮೂಲಕ ನೀರು ಹರಿಸಿ ಕಾಗವಾಡ ತಾಲೂಕಿನ ಉತ್ತರ ಭಾಗದ ಸುಮಾರು 2 ಲಕ್ಷ ಎಕ್ಕರ ಪ್ರದೇಶಕ್ಕೆ ನೀರು ಹರಿಸಲಾಗುತ್ತಿದೆ. ಕಾಲುವೆಗಳು ಸಂಪೂರ್ಣ ಬಿರುಕು ಬಿಟ್ಟಿದ್ದು ಐನಾಪುರದ ಸುಮಾರು 5 ಸಾವಿರ ಎಕರೆ ಕ್ಷೇತ್ರಗಳಲ್ಲಿ ನೀರು ಬಸಿದು ಬೆಳೆ ಬೆಳೆಯಲು ಬರುತ್ತಿಲ್ಲ. ಈಗ ಸುಮಾರು ಒಂದು ಲಕ್ಷ ಟನ್‍ದಷ್ಟು ಬೆಳೆದ ಕಬ್ಬು ಭೂಮಿಯಲ್ಲಿದೆ, ನೀರು ನಿಂತಿರುವದರಿಂದ ಕಬ್ಬು ಕಟಾವು ಆಗುತ್ತಿಲ್ಲ. ಹಂಗಾಮಿಗೆ ಕೇವಲ ಒಂದೇ ತಿಂಗಳು ಉಳಿದಿದೆ.

ಇದರಿಂದ ಕೋಟ್ಯಾಂತ ರೂ. ಹಾನಿ ರೈತರಿಗೆ ಆಗುತ್ತಿದೆ. ಇದನ್ನು ಸರಕಾರ ಭರಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಮಾತನಾಡಿದ ಅಭಿಯಂತರ ಬಿ.ಆರ್.ರಾಠೋಡ ಬರುವ ಜೂನ್ ಒಳಗೆ ಕಾಲುವೇ ದುರಸ್ತಿಗೊಳಿಸಿ ಯೋಜನೆ ಪ್ರಾರಂಭಿಸುತ್ತೇವೆ. ನಿರ್ದಿಷ್ಟ ಸಮಯದಲ್ಲಿ ದುರಸ್ತಿಗೊಳ್ಳದಿದ್ದರೆ ಯೋಜನೆ ಬಂದ್ ಇಡುತ್ತೇವೆ ಎಂದು ರೈತರಿಗೆ ಭರವಸೆ ನೀಡಿದರು.

ಈ ವೇಳೆ ರೈತ ಮುಖಂಡರಾದ ಪ್ರವೀಣ ಗಾಣೀಗೇರ, ರಾಜೇಂದ್ರ ಪೆÇೀತದಾರ, ಮೋಹನ ಮುತಾಲಿತ ಕುಮಾರ ಅಪರಾಜ, ಸಂಜಯ ಭಿರಡಿ, ಅರವಿಂದ ಕಾರ್ಚಿ, ಬಾಹುಬಲಿ ಮಲ್ಲೇವಾಡಿ, ಸುರೇಶ ಗಾಣಿಗರ, ಸುನೀಲ ಪಾಟೀಲ, ಅಧಿಕಾರಿಗಳಾದ ಪ್ರವೀಣ ಹುಣಸಿಕಟ್ಟಿ, ಪ್ರಶಾಂತ ಪೆÇೀತದಾರ ಉಪಸ್ಥಿತರಿದ್ದರು.

Tags:

error: Content is protected !!