Belagavi

ನೀರಿನ ಸಮಸ್ಯೆ: ಪಾಲಿಕೆ ಆಯುಕ್ತರ ಭೇಟಿಯಾದ ಬಿಜೆಪಿ ನಗರಸೇವಕರ ನಿಯೋಗ

Share

ಒಂದು ವಾರದವರೆಗೆ ನಿರಂತರವಾಗಿ ವಾಲ್ ಮೆನ್ ಗಳ ಪ್ರತಿಭಟಣೆಯಿಂದ ಬೆಳಗಾವಿಯಲ್ಲಿ ನೀರು ಸರಬರಾಹು ಆಗುತ್ತಿಲ್ಲ. ಈ ಬಗ್ಗೆ ಬಿಜೆಪಿ ನಗರ ಸೇವಕರು ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ ಗಾಳಿ ಅವರಲ್ಲಿ ನೀರಿನ ಸಮಸ್ಯೆ ಪರಿಹರಿಸುಂತೆ ಮನವಿ ಮಾಡಿದರು.

ಬೆಳಗಾವಿ ನಗರದಲ್ಲಿ 1 ವಾರದಿಂದ ನಿರಂತರವಾಗಿ ವಾಲ್ ಮೆನ್ ಗಳು ಪ್ರತಿಭಟಣೆ ಮಾಡುತ್ತಿದ್ದು, ನಗರದಲ್ಲಿ ನೀರಿನ ಸಮಸ್ಯೆಯಾಗಿದೆ.  ಈ ಕೂಡಲೇ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು. ಯಾವ ವಾಲ್ ಮೆನ್ ಗಳು ಪುನಃ ಕೆಲಸಕ್ಕೆ ಸೇರಲು ಬಯಸುತ್ತಾರೋ ಅಂತವರನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ಮತ್ತು ಬೆಳಗಾವಿಯ ಯಾವ ಏರಿಯಾಗಳಲ್ಲಿ ನಿರಿನ ಸಮಸ್ಯೆಯಾಗಿದೆ ಅಂತಹ ಸ್ಥಳದಲ್ಲಿ ನೀರಿನ ಟ್ಯಾಂಕರ್ ಗಳನ್ನು ಕಳಿಸುವಂತೆ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಗಾಳಿ ಅವರಿಗೆ ಬಿಜೆಪಿ ಸೇವಕರು ಭೇಟಿ ಮಾಡಿ ನೀರಿನ ಸಮಸ್ಯೆಯನ್ನು ಆದಷ್ಟೂ ಬೇಗನೆ ಪರಿಹರಿಸುವಂತೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಸೇವಕ ಬೈರು ಗೌಡ ಪಾಟಿಲ್, ಜಯತೀರ್ಥ ಸವಂದತ್ತಿ ನಗರ ಸೇವಕರಾದ ಸಂತೋಷ ಪೆಡ್ನೆಕರ, ಪ್ರವಿಣ ಪಾಟೀಲ, ರಾಜಶೇಖರ ದೋಣಿ, ವೀಣಾ ವಿಜಾಪುರೆ ಸವಿತಾ ಕಾಂಬ್ಳೆ ಮತ್ತು ಆದಿತ್ಯ ಪಾಟೀಲ ಉಪಸ್ಥಿತರಿದ್ದರು.

Tags:

error: Content is protected !!