COVID-19

ನಿಪ್ಪಾಣಿಯಲ್ಲಿ ವೀಕೆಂಡ್ ಕರ್ಫ್ಯೂಗೆ ನೀರಸ ಪ್ರತಿಕ್ರಿಯೆ

Share

ಕೇವಲ ಅಂಗಡಿ ಮುಗ್ಗಟ್ಟುಗಳನ್ನು ಬಂದ ಮಾಡಿ ಅಗತ್ಯವಸ್ತುಗಳ ಖರೀದಿಗೆ ಸಮಯಾವಕಾಶ ನಿಗದಿ ಮಾಡದ ಹಿನ್ನೆಲೆಯಲ್ಲಿ ಜನತೆ ಅಗತ್ಯವಸ್ತುಗಳ ಖರೀದಿ ನೆಪದಲ್ಲಿ ಅನಗತ್ಯ ಓಡಾಟ ನಡೆಸುತ್ತಿದ್ದಾರೆ. ಇನ್ನು ಜನರನ್ನು ನಿಯಂತ್ರಿಸಬೇಕಿದ್ದ ಪೆÇಲೀಸರಿಂದಲೂ ನಿರ್ಲಕ್ಷವಹಿಸಿರುವ ಘಟನೆ ನಡೆದಿದೆ

ಕೊರೊನಾ ಹಬ್ಬುವಿಕೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಜಾರಿಗೊಳಿಸದ ವಿಕೆಂಡ್ ಕಫ್ಯೂ ಹಿನ್ನೆಲೆ ನಿಪ್ಪಾಣಿ ನಗರದಲ್ಲಿ ಜನ ಕ್ಯಾರೆ ಎನ್ನುತ್ತಿಲ್ಲ. ಎಲ್ಲರೂ ಮಾಸ್ಕ ಇಲ್ಲದೇ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಎಂದಿನಂತೆ ವಾಹನಗಳ ಸಂಚಾರ ಸಾಮಾನ್ಯವಾಗಿದ್ದು, ಎಂದಿನಂತೆ ಜನಜೀವನ ಮುಂದುವರೆದಿದೆ. ಇನ್ನು ಪೆÇಲೀಸರು ಕಾಟಾಚಾರಕ್ಕೆ ಎನ್ನುವಂತೆ ತಪಾಸಣೆ ನಡೆಸುತ್ತಿದ್ದಾರೆ. ವೀಕೆಂಡ್ ಕಫ್ರ್ಯೂ ಹಿನ್ನೆಲೆ ಪೆÇಲೀಸರು ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿಲ್ಲ.

Tags:

error: Content is protected !!