Events

ನಿಪ್ಪಾಣಿಯಲ್ಲಿ ಮ್ಯಾಗ್ನಂ ಮಲ್ಟಿಪ್ಲೆಕ್ಸ್ ಸಿನಿಮಾ ಟಾಕೀಸ್ ಲೋಕಾರ್ಪಣೆಗೊಳಿಸಿದ ಜೊಲ್ಲೆ ದಂಪತಿ

Share

ನಿಪ್ಪಾಣಿ ಪಟ್ಟಣದಲ್ಲಿ ಜೊಲ್ಲೆ ಉದ್ಯೋಗ ಸಮೂಹದಿಂದ ನೂತನವಾಗಿ ನಿರ್ಮಾಣವಾಗಿರುವ ಮ್ಯಾಗ್ನಂ ಸಿನಿಮಾ ಟಾಕೀಸನ್ನು ಜೊಲ್ಲೆ ದಂಪತಿಗಳು ಲೋಕಾರ್ಪಣೆಗೊಳಿಸಿದರು.

ನಿಪ್ಪಾಣಿ ನಗರವಂತೂ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಬೆಳಗಾವಿಯನ್ನು ಹೊರತು ಪಡಿಸಿದರೆ ಜಿಲ್ಲೆಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರೋ ನಗರ ನಿಪ್ಪಾಣಿ. ಹೀಗಾಗಿ ಇಲ್ಲಿನ ಜನರು ಕೂಡ ಬೆಳಗಾವಿ ನಗರದಲ್ಲಿ ಸಿಗೋ ಸೌಲಭ್ಯಗಳು ನಿಪ್ಪಾಣಿಯಲ್ಲಿ ಸಿಗಬೇಕೆಂದು ಬಯಸೋದು ಸಹಜವೇ. ಹಾಗಾಗಿಯೇ ನಿಪ್ಪಾಣಿ ನಗರದಲ್ಲಿ ಮ್ಯಾಗ್ನಂ ಮಲ್ಟಿಪೆಕ್ಸ್ ಟಾಕೀಸ್‍ನ್ನು ಜೊಲ್ಲೆ ಗ್ರೂಪ್ ಇಂದು ಓಪನಿಂಗ್ ಮಾಡಿದ್ದಾರೆ. ನಿಪ್ಪಾಣಿ ನಗರದಲ್ಲಿ ಚಿಕ್ಕೋಡಿ ರಸ್ತೆಗೆ ಹೊಂದಿಕೊಂಡಿರೋ ವಾಣಿಜ್ಯ ಮಳಿಗೆಯಲ್ಲಿ ಮ್ಯಾಗ್ನಂ ಮಲ್ಟಿಪ್ಲೆಕ್ಸ್ ಟಾಕೀಸ್ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ನಿಪ್ಪಾಣಿ ನಗರಸಭೆ ಅಧ್ಯಕ್ಷ ಜಯವಂತ ಬಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ, ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಚಂದ್ರಕಾಂತ ಕೋಟಿವಾಲೆ, ಬಸವಜ್ಯೋತಿ ಯುಥ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ ಮುಂತಾದವರ ನೇತೃತ್ವದಲ್ಲಿ ಚಾಲನೆ ಪಡೆದುಕೊಂಡಿತು. ಆರಂಭದಲ್ಲಿ ವಿಶ್ವಗುರು ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಟವೃಷ್ಟಿಗೈದು ಗೌರವ ಸಮರ್ಪಿಸಿದರು.

ಇಷ್ಟು ದಿನಗಳ ಕಾಲ ನಿಪ್ಪಾಣಿ, ಚಿಕ್ಕೋಡಿ ಸೇರಿದಂತೆ ಈ ಭಾಗದ ಜನರಿಗೆ ಮಲ್ಟಿಪ್ಲೆಕ್ಸ್ ಟಾಕೀಸ್ ಅನ್ನೋದು ಗಗನ ಕುಸುಮವಾಗಿತ್ತು. ಮಲ್ಟಿಪ್ಲೆಕ್ಸ್‍ನಲ್ಲಿ ಸಿನಿಮಾ ನೋಡೋದಕ್ಕೆ ಕೊಲ್ಹಾಪೂರ ಇಲ್ಲವೇ ಬೆಳಗಾವಿಗೆ ಹೋಗಬೇಕಿತ್ತು. ಇದೀಗ ಜೊಲ್ಲೆ ಗ್ರೂಪ್‍ನಿಂದಾಗಿ ಇಲ್ಲಿನ ಜನರು ಮಲ್ಟಿಪ್ಲೆಕ್ಸ್ ಟಾಕೀಸ್ ನಲ್ಲಿ ಸಿನಿಮಾ ನೋಡೋ ಮೂಲಕ ಮನರಂಜನೆಯನ್ನು ಪಡೆದುಕೊಳ್ಳುವಂತಾಗಿದೆ. ಮ್ಯಾಗ್ನಂ ಸಿನಿಮಾ ಟಾಕೀಸ್‍ನಲ್ಲಿ ಒಟ್ಟು ಎರಡು ಟಾಕೀಸ್‍ಗಳನ್ನು ನಿರ್ಮಾಣ ಮಾಡಲಾಗಿದ್ದು, ಮೊದಲ ದಿನದ ಹಿನ್ನೆಲೆಯಲ್ಲಿ ಒಂದು ಕಡೆಗೆ ಹಿಂದಿ ಭಾμÉಯ ಏಟಿಥ್ರೀ ಸಿನಿಮಾ ಹಾಗೂ ಇನ್ನೊಂದು ಕಡೆಗೆ ಪುಷ್ಪ ಸಿನಿಮಾವನ್ನು ಪ್ರದರ್ಶನ ಮಾಡಲಾಗಿತ್ತು. ಈ ಸಿನಿಮಾಗಳನ್ನು ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಸವಪ್ರಸಾದ ಜೊಲ್ಲೆ, ನಗರಸಭೆ ಆಯುಕ್ತ ಜಗದೀಶ ಹುಲಗೆಜ್ಜಿ ಸೇರಿದಂತೆ ಈ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಹಾಗೂ ಸಾರ್ವಜನಿಕರು ವೀಕ್ಷಣೆ ಮಾಡಿದರು. ಸಿನಿಮಾ ವೀಕ್ಷಿಸಿದ ಬಳಿಕ ಮಾಧ್ಯಮಗಳೊಂದಿಗೆ ಸಚಿವೆ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ಮಲ್ಟಿಪ್ಲೆಕ್ಸ್ ಸಿನಿಮಾ ಟಾಕೀಸ್ ಓಪನ್ ಮಾಡಿರೋ ಉದ್ದೇಶದ ಕುರಿತು ಹರ್ಷ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ನಿಪ್ಪಾಣಿ ಜನರ ಬಹು ದಿನಗಳ ಕನಸು ಇಂದು ಈಡೇರಿದಂತಾಗಿದ್ದು. ಇಷ್ಟು ದಿನ ಜೊಲ್ಲೆ ಕುಟುಂಬ ರಾಜಕಾರಣ, ಸಹಕಾರ, ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಂತಾಗಿದೆ.

Tags:

error: Content is protected !!