ಮಕ್ಕಳಲ್ಲಿ ಕೊರೊನಾ ಲಕ್ಷಣಗಳು ಹೆಚ್ಚಾಗುತ್ತಿದೆ. ಮಕ್ಕಳ ಚಿಕಿತ್ಸೆಗೆ ಔಷಧಿ ಕೊರತೆ ಆಗದಂತೆ ಕ್ರಮ ವಸತಿ ಶಾಲೆಗಳ ಬಂದ್ ಬಗ್ಗೆ ಡಿಸಿಗಳಿಗೆ ಜವಾಬ್ದಾರಿ ಕೊಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.

ಸಿಎಂ ಬೊಮ್ಮಾಯಿ ವಿಡಿಯೋ ಕಾನ್ಫರೆನ್ಸ ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿ ಸಚಿವ ಆರಗ ಜ್ಞಾನೇಂದ್ರ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಮಾರ್ಕೆಟ್‍ಗಳನ್ನು ಬೇರೆ ಬೇರೆ ಕಡೆ ತೆರೆಯಲು ಚರ್ಚೆ ನಡೆಸಲಾಗಿದೆ. ಒಂದೇ ಕಡೆ ಜನಜಂಗುಳಿ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು. ಪ್ರತಿಭಟನೆ, ಸಭೆ, ಸಮಾರಂಭದ ಬಗ್ಗೆ ಪೊಲೀಸರಿಗೆ ಮೊದಲೇ ಮಾಹಿತಿ ನೀಡಬೇಕು. ಇಡೀ ರಾಜ್ಯಕ್ಕೆ ಏಕರೂಪದ ಕ್ರಮ ಅಸಾಧ್ಯ ಎಂದರು. ರಾಜ್ಯದಲ್ಲಿ ನಾಳೆಯಿಂದಲೇ ಹೊಸ ರೂಲ್ಸ್ ಜಾರಿ ಆಗಲಿದ್ದು. ರೂಲ್ಸ ಬ್ರೇಕ್ ಮಾಡಿದ್ರೆ ಕಠಿಣ ಕ್ರಮ ಖಚಿತ ಮಾಸ್ಕ್, ದೈಹಿಕ ಅಂತರವನ್ನು ಎಲ್ಲರೂ ಕಡ್ಡಾಯ ಪಾಲನೆ ಮಾಡಬೇಕು ಎಂದು ಗೃಹ ಸಚಿವರು ಎಚ್ಚರಿಕೆ ನೀಡಿದರು.
ಇನ್ನು ಪಾದಯಾತ್ರೆಯಲ್ಲಿ ಹಲವರಿಗೆ ಕೊರೊನಾ ಬಂದಿದೆ. ಪಾಸಿಟಿವ್ ವಿಚಾರವನ್ನು ಅನೇಕರು ಮುಚ್ಚಿಟ್ಟಿದ್ದಾರೆ. ಪಾದಯಾತ್ರೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.