Politics

ನಾನು ಡಿಕೆ ಶಿವಕುಮಾರ್ ಇಬ್ಬರೇ ಆದ್ರೂ ಪಾದಯಾತ್ರೆ ಮಾಡ್ತೇವೆ: ಸಿದ್ದರಾಮಯ್ಯ

Share

ನಾವು ಕೊವಿಡ್ ನಿಯಮಗಳನ್ನು ಪಾಲಿಸುತ್ತೆಲೇ ಪಾದಯಾತ್ರೆಯನ್ನು ಮಾಡೇ ಮಾಡುತ್ತೇವೆ ಎಂದು ಮಾಜಿ ಸಿ.ಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಜಿ ಸಿ.ಎಂ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾವು ಪಾದಯಾತ್ರೆ ಮಾಡೇ ಮಾಡ್ತೀವಿ. ಈ ಪಾದಯಾತ್ರೆಯನ್ನು ನಾವು ಈಗ ಆಯೋಜನೆ ಮಾಡಿಲ್ಲ. ಇದನ್ನು ಆಯೋಜನೆ ಮಡಬೇಕೆಂದು ನಾವು ಬೆಳಗಾವಿ ಅಧಿವೇಶನಕ್ಕಿಂತ ಮುಂಚೆಯೇ ನಿರ್ಧಾರ ಮಾಡಿದ್ದೇವೆ ಎಂದರು. ಇನ್ನು ಕೊವಿಡ್ ಹಾಗೂ ಒಮಿಕ್ರಾನ್ ಹಬ್ಬುತ್ತಿರುವ ಈ ಸಂದರ್ಭದಲ್ಲಿ ಪಾದಯಾತ್ರೆಯನ್ನು ಹಿಂದೆ ಮುಂದೆಮುಂದೆ ಮಾಡಿಕೊಳ್ಳಬಹುದಿತ್ತು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪಾದಯಾತ್ರೆ ಯಾವುದೇ ರಾಜಕೀಯ ಉದ್ದೇಶ ಹೊಂದಿಲ್ಲ. ಇನ್ನು ಇದು ನಮಗೆ ಅನಿವಾರ್ಯತೆ ಅಲ್ಲ. ಇದು ರಾಜಕೀಯ ಷಡ್ಯಂತ್ರ. ಕುಡಿಯುವ ನೀರು ನಮ್ಮ ಹಕ್ಕು, ಅದಕ್ಕಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಈ ವೇಳೆಯಲ್ಲಿ ಯಾಕೆ ಅಣ್ಣಾಮಲೈ ಧರಣಿ ಮಾಡಬೇಕಿತ್ತು… ಹಾಗಾಗಿ ಎರಡುವರೆ ವರ್ಷಗಳಲ್ಲಿ ಸರಕಾರ ಏನು ಮಾಡಿತು ಎಂದು ಪ್ರಶ್ನೆ ಮಡಿದರು.

ಇದೇ ವೇಳೆ ಕೊರೊನಾ ಹೆಚ್ಚಾದರೆ ಅದಕ್ಕೆ ಕಾಂಗ್ರೆಸ್ ಕಾರಣ ಎಂಬ ಆರೋಗ್ಯ ಸಚಿವರ ಹೇಳಿಕೆ ಕುರಿತಂತೆ ಮಾತನಾಡಿದ ಅವರು, ಮೊದಲು ಆರೋಗ್ಯ ಸಚಿವರು ಷಡ್ಯಂತ್ರ ಮಾಡಿದ್ದಾರೆ ಈಗ ಅದನ್ನು ಡಿಫೆಂಡ್ ಮಾಡಿಕೊಳ್ಳುತ್ತಿದ್ದರೆ. ಹಾಗಾದ್ರೆ ನರೇಂದ್ರ ಮೋದಿ ಪಂಜಾಬ್‍ಗೆ ಯಾಕೆ ಹೋದ್ರು ಎಂದು ಪ್ರಶ್ನೆ ಮಾಡಿದರು.

ಇನ್ನು ಬಿಜೆಪಿ ನಾಯಕರು ಮಾಡಿದ ತಪ್ಪನ್ನೇ ನೀವೂ ಮಾಡ್ತೀರಾ ಎಂಬ ಮಾಧ್ಯಮದವರ ಮಾತಿಗೆ ಕೆಂಡವಾದ ಡಿಕೆಶಿ ಮಧ್ಯಪ್ರವೇಶ ಮಾಡಿ ಕೊರೊನಾದಿಂದಾಗಿ 3ಲಕ್ಷಜನ ಸತ್ತರೂ ಪರಿಹಾರದ ಪಟ್ಟಿಕೊಡಲಿಲ್ಲ. 40-40 ಜನ ಸತ್ತಿದ್ದಾರೆಂದು ವರದಿ ನೀಡಿದ್ದಾರೆ. ಇನ್ನು ನಾವು ಅಧಿವೇಶನದ ವೇಳೆ ಗದ್ದಲ ಮಾಡಿದ್ದರಿಂದ ತಲಾ 1ಲಕ್ಷ ರೂ ಪರಿಹಾರ ನೀಡಿದ್ದಾರೆ. ಇನ್ನು ಆರೋಗ್ಯ ಸಚಿವ ಸುಧಾಕರ್ 34ಜನ ಮೃತಪಟ್ಟಾಗ 3ಜನ ಮೃತಪಟ್ಟರು ಎಂದು ವರದಿ ನೀಡಿದ್ದಾರೆ. ಇನ್ನು ನಾವು ಪೆಟ್ರೋಲ್ ಡೀಸೇಲ್ ಬೆಲೆ ಏರಿಕೆ ಖಂಡಿಸಿ ಹೋರಾಟ ಮಾಡಿದರೆ ನಮ್ಮ ಮೇಲೆ ಕೇಸ್ ಹಾಕಿದರು. ಆದರೆ ಬಿಜೆಪಿ ಅವರ ಮಂತ್ರಿಗಳ ಮೇಲೆ ಯಾಕೆ ಕೇಸ್ ಹಾಕಲಿಲ್ಲ ಎಂದು ಪ್ರಶ್ನೆ ಮಾಡಿದರು.

ಇನ್ನು ಕಾಂಗ್ರೆಸ್ ಪಾದಯಾತ್ರೆ ರಾಜ್ಯಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನು ಕೊರೊನಾ ರಾಜ್ಯಾದ್ಯಂತ ವ್ಯಾಪಕವಾಗಿ ಹೆಚ್ಚಾಗುತ್ತಿದ್ದು, ಈ ಸಂದರ್ಭದಲ್ಲಿ ಕಾಂಗ್ರೆಸ್ ಪಾದಯಾತ್ರೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

Tags:

error: Content is protected !!