Protest

ನಮ್ಮ ಫಲವತ್ತಾದ ಭೂಮಿಯನ್ನು ನಮಗೆ ಬಿಡಿ ಬೆಳಗಾವಿ-ಧಾರವಾಡ ರೈಲು ಕಾಮಗಾರಿಗೆ ರೈತರ ಆಕ್ರೋಶ

Share

ಬೆಳಗಾವಿ ಶಾರವಾಡ ರೈಲು ಕಾಮಗಾರಿಯಲ್ಲಿ ತಮ್ಮ ಫಲವತ್ತಾದ ಜಮೀನನ್ನು ಸರಕಾರ ವಶಕ್ಕೆ ತೆಗೆದುಕೊಳ್ಳುತ್ತಿದೆ. ಹಾಗಾಗಿ ಈ ರೈಲು ಕಾಮಗಾರಿಯನ್ನು ಬರಡು ಭೂಮಿಯಲ್ಲಿ ತೆಗೆದುಕೊಂಡು ಹೋಗಬೇಕೆಂದು ಒತ್ತಾಯಿಸಿ ರೈತರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ವಿ/ವೊ: ಕೇಂದ್ರ ಸರಕಾರ ಧಾರವಾಡ ಬೆಳಗಾವಿ ರೈಲು ಕಾಮಗಾರಿಗೆ ರೈತರ ಫಲವತ್ತಾದ ಜಮೀನನ್ನು ವಶಕ್ಕೆ ಪಡೆದುಕೊಳ್ಳುತ್ತಿದೆ. ಇದರಿಂದ ಸಾವಿರಾರು ರೈತರ ಬಾಳು ಬೀದಿಗೆ ಬರುತ್ತದೆ. ರೈತರು ಬೆಳೆದ ಬೆಳೆಗಳನ್ನು ಸರ್ವನಾಶ ಮಾಡಿ ಸರಕಾರ ರೈತರ ಬಾಳಿಗೆ ಮಣ್ಣು ಹಾಕುತ್ತಿದೆ. ಹಾಗಾಗಿ ಸರಕಾರ ನಮ್ಮ ಜಮೀಜನ್ನು ರೈಲು ಕಾಮಗಾರಿಗೆ ತೆಗೆದುಕೊಂಡರೆ ನಾವು ಬಾಳಿಗೆ ಆಧಾರವಾದ ಜಮೀನನ್ನು ಕಳೆದುಕೊಂಡು ಜೀವನ ಹೇಗೆ ನಡೆಸುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾ ನಿರತ ರೈತ ಮಹಿಳೆ ಸರಸ್ವತಿ ಬುಕಡೇಕರ್, ನಾವು ಜಮೀನಿನಲ್ಲಿ ಕಬ್ಬಯ ಭತ್ತ, ಕಡಪಲ, ಕಡಲೆ, ಜೋಳ ಮೊದಲಾದ ಬೆಳೆಗಳನ್ನು ಬೆಳೆದಿದ್ದೇವೆ. ನಮಗೆ ಇರುವುದೇ ತುಂಡು ಜ,ಮೀನು. ಇನ್ನು ಸರಕಾರ ಅದನ್ನೂ ರೈಲ್ವೆ ಯೋಜನೆಗೆ ಕಸಿದುಕೊಂಡರೆ ನಾವು ಹೊಟ್ಟೆಗೇನು ಮಡುವುದು ಎಂದು ಆಕ್ರೋಶ ಹೊರಹಾಕಿದ್ದಾರೆ. ನಮಗೆ ನಮ್ಮ ಭೂಮಿ ಬೇಕೇ ಬೇಕಕು ಎಂದು ಬೆಳಗಾವಿ ಸಂಸದೆ ಮಂಗಳಾ ಅಂಗಡಿ ವಿರುದ್ಧ ಕಿಡಿ ಕಾರಿದರು.
ಇದೇ ವೇಳೆ ಮಾತನಾಡಿದ ಇನ್ನೋರ್ವ ರೈತರು, ಕೇಂದ್ರ ಸರಕಾರದ ಬೆಳಗಾವಿ ಧಾರವಾಡ ರೈಲು ಮಾರ್ಗ ಕಾಮಗಾರಿಗಾಗಿ ಸರಕಾರ ಬಡ ರೈತರಿಂದ ಫಲವತ್ತಾದ ಜಮೀನನ್ನು ವಶಮಾಡಿಕೊಳ್ಳುತ್ತಿದೆ. ಈ ರೈಲು ಯೋಜನೆಯಿಂದ ಬಡ ಕುಟುಂಬಗಳು ಬೀದಿಗೆ ಬರುತ್ತವೆ. ನಮಗೆ ಸರಕಾರದ ಪರಿಹಾರ ಬೇಡ. ನಮಗೆ ನಮ್ಮ ಭೂಮಿ ಬೇಕು. ಒಂದು ವೇಳೆ ಸರಕಾರ ರೈಲು ಯೋಜನೆಗೆ ಚಾಲನೆ ನೀಡಿದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಕೇಂದ್ರ ಸರಕಾರದ ಬೆಳಗಾವಿ-ಧಾರವಾಡ ರೈಲು ಯೋಜನೆಗೆ ರೈತರಿಂದ ತೀವೃ ಆಕ್ರೋಶ ವ್ಯಕ್ತವಾಗಿತ್ತಿದೆ. ಇನ್ನು ಸರಕಾರ ಈ ರೈಲು ಯೋಜನೆಯನ್ನು ಪ್ರಾರಂಭಿಸಿದ್ದೇ ಆದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಇನ್ನು ಈ ವಿಚಾರ ಕುರಿತಂತೆ ಸರಕಾರದ ನಿರ್ಧಾರ ಏನೆಂದು ಕಾದು ನೋಡಬೇಕಿದೆ.

Tags:

error: Content is protected !!