ರಾಮನಗರ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಕಾರ್ಯಕ್ರಮದ ವಿರುದ್ಧವೂ ಕೇಸ್ ಹಾಕಬೇಕು. ಅದೇ ರೀತಿ ಬಿಜೆಪಿಯವರು ಎಲ್ಲೆಲ್ಲಿ ಸಭೆ ಮಾಡಿದ್ದಾರೆ..? ಅವರ ವಿರುದ್ಧವೂ ಕೇಸ್ ಹಾಕಬೇಕು. ಎಲ್ಲರ ಮೇಲೂ ಕೇಸ್ ಹಾಕುವಂತೆ ನಾವು ಹೋರಾಟ ಮುಂದುವರಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ.ಶಿವಕುಮಾರ್ ಮೇಕೆದಾಟು ಮಾಡಲಿ, ಬಿಡಲಿ, ನಮ್ಮ ಮೇಲೆ ಅವರು ಏನೆಲ್ಲಾ ಬೇಕು ಪ್ರಯೋಗ ಮಾಡುತ್ತಿದ್ದಾರೆ ಮತ್ತು ನಡೆಯುತ್ತಿದೆ. ನಾವು ಭೇಟಿ ಕೊಟ್ಟಿದ್ದ ಶಾಲೆಗೂ ನೋಟಿಸ್ ಕೊಟ್ಟಿದ್ದಾರಂತೆ. ಶಾಲೆಗೂ ಕಿರುಕುಳ ನೀಡಲು ಆರಂಭಿಸಿದ್ದಾರೆ ಎಂದು ಕಿಡಿಕಾರಿದರು. ಇನ್ನು ಬಿಜೆಪಿಯವರ ಟಾರ್ಗೆಟ್‍ನ್ನು ನಾವು ಎದುರಿಸಲೇಬೇಕಾಗುತ್ತದೆ. ಒಂದು ದಿನ ಒಂದೇ ಕೇಸ್ ಹಾPಬಹುದಿತ್ತು. ದಿನಾಲೂ ಕೇಸ್ ಹಾಕುವ ಪ್ರಮೇಯ ಏನಿತ್ತು..? ಬಿಜೆಪಿ ನಾಯಕರ ಮೇಲೂ ಕೇಸ್ ಹಾಕಬಹುದಿತ್ತು. ಐದನೂರು ನಾಯಕರು ಇದ್ದರೂ ಎಲ್ಲರ ಮೇಲೂ ಕೇಸ್ ಹಾಕಬೇಕಿತ್ತು. ನಮ್ಮನ್ನು ಜೈಲಿಗೆ ಹಾಕಿ, ಖುಷಿ ಪಡಬಹುದು, ಖುಷಿ ಪಡಲಿ ಎಂದು ಲೇವಡಿ ಮಾಡಿದರು.