ಸಚಿವ ಆರ್.ಅಶೋಕ್‍ಗೆ ಕೊರೊನಾ ಪಾಸಿಟಿವ್ ಆಗಿರುವ ಕುರಿತು ಮಾತನಾಡಿದ ಸಚಿವ ಡಾ.ಕೆ.ಸುಧಾಕರ್ ನಾನು ಅಶೋಕ್ ಅವರ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿ ಇರಲಿಲ್ಲ. ಮೊನ್ನೆ ಸಭೆ ಬಳಿಕ, ಸುದ್ದಿಗೋಷ್ಠಿ ನಡೆಸಿದಾಗಲೂ ನಾವು ಮಾಸ್ಕ್ ಹಾಕಿಕೊಂಡಿದ್ದೇವು. ಮೊನ್ನೆಯಷ್ಟೇ ಮುಖ್ಯಮಂತ್ರಿಗಳು ಮತ್ತು ನಾನು ಟೆಸ್ಟ್ ಮಾಡಿಸಿದ್ದೇವು. ನೆಗೆಟಿವ್ ರಿಪೋರ್ಟ ಬಂದಿದೆ. ಈವರೆಗೆ 50-60 ಸಲ ಟೆಸ್ಟ್ ಮಾಡಿಸಿದ್ದೇನೆ. ಆದರೆ ದೇವರು, ರಾಜ್ಯದ ಜನರ ಆಶೀರ್ವಾದಿಂದ ಒಮ್ಮೆಯೂ ಪಾಸಿಟಿವ್ ಬಂದಿಲ್ಲ ಎಂದು ಸಮರ್ಥಿಸಿಕೊಂಡರು.
