ವಿಜಯಪುರ ಜಿಲ್ಲೆಯ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ನಡೆದಾಡುವ ದೇವರು ಎಂದೇ ಖ್ಯಾತಿ. ತಮ್ಮ ಪ್ರವಚನಾಮೃತದಿಂದ ವಿಶ್ವದೆಲ್ಲೆಡೆ ಖ್ಯಾತಿ ಹೊಂದಿದ್ದಾರೆ. ಉತ್ತರ ಕರ್ನಾಟಕದ ಆರಾಧ್ಯದೈವರು ಇತ್ತಿಚೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಬೇಗ ಗುಣಮುಖರಾಗಲೆಂದು ಮುಸ್ಲಿಂ ಬಾಂಧವರು ಬಸವನಾಡು ವಿಜಯಪುರದ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ನಡೆದಾಡುವ ದೇವರು ಭಕ್ತರ ಆರಾಧ್ಯ ದೈವ ಸಿದ್ದೇಶ್ವರ ಸ್ಮಾಮಿಜಿಗಳು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸಿ ಮುಸ್ಲಿಂ ಬಾಂಧವರು ದರ್ಗಾದಲ್ಲಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಸಿದ್ದೇಶ್ವರ ಶ್ರೀಗಳು ಯಾವುದೇ ಜಾತಿ, ಮಂತ, ಪಂಥ ಎಂದು ನೋಡದೇ ಎಲ್ಲರೂ ಸಹಿತ ಸನ್ಮಾರ್ಗದಿಂದ ಸಾಗಬೇಕು ಎಂದು ತಮ್ಮ ಪ್ರವಚನದ ಮೂಲಕ ಜನರಿಗೆ ಸಂದೇಶವನ್ನು ಸಾರಿದವರು. ಶ್ರೀಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ…
ಹೌದು ವಿಜಯಪುರ ನಗರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮಿ ಜಿ ಗಳು ಅಸಖ್ಯಾಂತ ಭಕ್ತ ವೃಂದವನ್ನು ಹೊಂದಿದ್ದಾರೆ. ಅವರನ್ನು ನಡೆದಾಡುವ ದೇವರೆಂತಲೇ ಉತ್ತರ ಕರ್ನಾಟಕದ ಜನತೆ ಭಾವಿಸಿದ್ದಾರೆ. ಕಳೆದ ವಾರ ಚಿಕ್ಕೊಡಿಯಲ್ಲಿ ಪ್ರವಚನ ಕಾರ್ಯಕ್ರಮವೊಂದಕ್ಕೆ ತೆರಳಿರುವ ವೇಳೆ ಕಾಲು ಜಾರಿ ಬಿದ್ದ ಪರಿಣಾಮ ನಡೆದಾಡುವ ದೇವರಿಗೆ ಸ್ವಣ್ಣ ಪ್ರಮಾಣದ ಗಾಯಗಳಾಗಿದ್ದು ಅವರನ್ನು ಮಹಾರಾಷ್ಟ್ರದ ಕನ್ನೇರಿ ಮಠದ ಸಿದ್ದಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಸಹಿತ ನೀಡಲಾಗುತ್ತಿದೆ. ಈಗಾಗಲೇ ಅವರ ಭಕ್ತರು ಸಹಿತ ಜನತೆ ಆತಂಕ ಪಡೆವ ಅವಶ್ಯಕತೆ ಇಲ್ಲ, ಅವರು ಆದಷ್ಟು ಬೇಗಾ ಗುಣಮುಖಾರಾಗಿ ಬರುತ್ತಾರೆ ಎಂಬ ಮಾಹಿತಿಯನ್ನು ಸಹಿತ ನೀಡಿದ್ದಾರೆ. ಇದರ ಮದ್ಯೆ ಮುಸ್ಲಿಂ ಭಾಂಧವರು ಸಹಿತ ಸಿದ್ದೇಶ್ವರ ಸ್ವಾಮಿಜಿಗಳು ಬೇಗ ಗುಣಮುಖರಾಗಲೆಂದು ಪ್ರಾರ್ಥನೆ ಸಲ್ಲಿಸಿದರು…
ವಿಜಯಪುರ ನಗರದ ಹಜರತ್ ಮುರ್ತುಜಾ ಖಾದ್ರೀ ದರ್ಗಾದಲ್ಲಿ ಅಲ್ಪಸಂಖ್ಯಾತ ಮುಖಂಡ ಯಾಸೀನ್ ಜವಳಿ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಯುವಕರು ಸೇರಿಕೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿ ಸಿದ್ದೇಶ್ವರ ಶ್ರೀಗಳು ಆದಷ್ಟು ಬೇಗ ಗುಣಮುಖರಾಗಿ ಬಂದು ಮರಳಿ ಜನರಿಗೆ ಪ್ರವಚನ ಮಾಡುವಂತಾಗಬೇಕು ಎಂದು ಪ್ರಾರ್ಥನೆ ಸಲ್ಲಿಸಿದರು…
ಇನ್ನೂ ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮಿಜಿಗಳು ಬಿದ್ದ ಪರಿಣಾಮವಾಗಿ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರ ಯೋಗ ಕ್ಷೇಮದ ಕುರಿತು ಹಲವು ಜನಪ್ರತಿನಿಧಿಗಳು ಸಹಿತ ವಿಚಾರಣೆ ನಡೆಸಿದ್ದು, ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಪ್ರಕಟಣೆಯ ಮೂಲಕ ಸ್ಪಷ್ಟನೆಯನ್ನು ನೀಡಿದ್ದಾರೆ. ಇದರ ಮದ್ಯೆ ಮುಸ್ಲಿಂ ಬಾಂಧವರು ಸಹಿತ ಶ್ರೀಗಳು ಬೇಗ ಗುಣಮುಖರಾಗಲೆಂದ ಪ್ರಾರ್ಥನೆ ಸಲ್ಲಿಸಿರುವದನ್ನು ನೋಡಿದರೆ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ನಡೆದು ಬಂದ ದಾರಿ ತೋರಿಸುತ್ತದೆ. ಅದು ಏನೇ ಇರಲಿ ಸಿದ್ದೇಶ್ವರ ಶ್ರೀಗಳು ಬೇಗ ಗುಣಮುಖರಾಗಲಿ ಎಂದು ನಾವು ಕೂಡಾ ಭಗವಂತನಲ್ಲಿ ಪ್ರಾರ್ಥಿಸೋಣ…