ಹೌದು ಧಾರವಾಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಶಿವಾನಂದ ಭಜಂತ್ರಿ ಅವರು ಅಧಿಕಾರ ಸ್ವೀಕರಿಸಿದರು.ಮೂಲತ: ಸವದತ್ತಿಯವರಾಗಿರುವ ಇವರು ದೆಹಲಿಯ ಜವಾಹರಲಾಲ್ ನೆಹರು ವಿವಿಯ ಇಂಗ್ಲಿಷ್ ಎಂ.ಎ ಹಾಗೂ ಎಂ.ಫಿಲ್ ಪದವೀಧರರಾಗಿದ್ದು,1999ರ ಕೆಎಎಸ್ ಬ್ಯಾಚಿನ ಅಧಿಕಾರಿಯಾಗಿರುವ ಇವರು ಖಾನಾಪೂರ ತಹಶೀಲ್ದಾರ್ ರಾಗಿ 11-04-2011ರಿಂದ 7-07-2012ರವರೆಗೆ ಸೇವೆ ಸಲ್ಲಿಸಿದ್ದಾರೆ. ತದನಂತರದಲ್ಲಿ ಬೈಲಹೊಂಗಲ ಉಪವಿಭಾಗಾಧಿಕಾರಿ ಯಾಗಿ,ಕರ್ನಾಟಕ ನೀರಾವರಿ ನಿಗಮದ ಮುಖ್ಯ ಆಡಳಿತಾಧಿಕಾರಿಯ ಹುದ್ದೆಯಿಂದ ವರ್ಗವಾಗಿ ಧಾರವಾಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಬಂದಿದ್ದಾರೆ.
