Belagavi

ದೇವಸ್ಥಾನಗಳನ್ನು ಸರಕಾರದ ಹಿಡಿತದಿಂದ ಮುಕ್ತಿಗೊಳಿಸುವ ಸರಕಾರದ ಕ್ರಮ ಸ್ವಾಗತಾರ್ಹ: ಸಿದ್ಧಲಿಂಗ ಸ್ವಾಮಿಜಿ

Share

ದೇವಾಲಯಗಳನ್ನು ಸರಕಾರದ ಹಿಡಿತದಿಂದ ಮುಕ್ತಿಗೊಳಿಸಿ ದೇವಸ್ಥಾನದ ಆದಾಯವನ್ನು ದೇವಸ್ಥಾನ ಅಭಿವೃದ್ಧಿಗೆ ಬಳಕೆ ಮಾಡುವ ಸರಕಾರದ ನಿರ್ಧಾರವನ್ನು ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮಿಸಿ ಸಂತಸ ವ್ಯಕ್ತಪಡಿಸಿದ್ದಾರೆ

.ದೇವಾಲಯಗಳನ್ನು ಸರಕಾರದ ಹಿಡಿತದಿಂದ ಮುಕ್ತಿಗೊಳಿಸಿ ದೇವಸ್ಥಾನದ ಆದಾಯವನ್ನು ದೇವಸ್ಥಾನ ಅಭಿವೃದ್ಧಿಗೆ ಬಳಕೆ ಮಾಡುವ ಕುರಿತಂತೆ ಬೊಮ್ಮಾಯಿ ನೇತೃತ್ವದ ಸರಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತ್ತು. ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮಿಜಿ ಮಾತನಾಡಿ, ಸರಕಾರದ ಹಿಡಿತದಿಂದ ದೇವಸ್ಥಾನಗಳನ್ನು ಮುಖ್ತಿಗೊಳಿಸುವ ಸರಕಾರದ ಕ್ರಮವನ್ನು ಸ್ವಾಗತಿಸಿದರು. ದೇವಸ್ಥಾನಗಳಿಂದ ಬಂದ ಆದಾಯವನ್ನು ದೇವಸ್ಥಾನದ ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಬಳಕೆ ಮಾಡುವ ಮೂಲಕ ಬರುವ ಭಕ್ತಾಧಿಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಇನ್ನು ಹಣ ಹೆಚ್ಚಗಿದ್ದಾಗ ಅದನ್ನು ಸರಕಾರ ಅಭಿವೃದ್ಧಿ ಕೆಲಸಗಳಿಗಾಗಿ ಬಳಕೆ ಮಾಡಿಕೊಳ್ಳಬಹುದು ಎಂದರು.

ಇನ್ನು ಇದೇ ವೇಳೆ ಮತಾಂತರ ನಿಷೇಧ ಕಾಯ್ದೆಯ ಕಾರಿಗೊಳಿಸುವ ಸರಕಾರದ ನಿರ್ಧಾರ ಕುರಿತಂತೆ ಮಾತನಾಡಿ ಸ್ವಾಮಿಜಿ, ಕಾಯ್ದೆ ಎಲ್ಲರಿಗೂ ಒಂದೇ ಆಗಿರಬೇಕು. ಪ್ರತಿಯೊಂದೂ ಮತಗಳು ತಮ್ಮದೇ ಆದ ಸುದ್ಧಾಂತಗಳನ್ನು ಇಟ್ಟುಕೊಂಡು ಬಂದಿರುತ್ತವೆ. ಹಾಗಾಗಿ ತಮ್ಮದೇ ಆದ ಸಿದ್ಧಾಂತಗಳ ಮೇಲೆ ಕಾರ್ಯ ನಿರ್ವಹಿಸಿಕೊಂಡು ಬಂದಿವೆ. ಹಾಗಾಗಿ ಯಾವುದೇ ಮತಗಳ ನಡುವೆ ಮಧ್ಯಸ್ಥಿಕೆ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದರು.
ಇನ್ನು ದೇವಸ್ಥಾನದ ಆದಾಯದ ಹಣ ದೇವಸ್ಥಾನಗಳ ಅಭಿವೃದ್ಧಿಗೆ ಬಳಕೆಯಾಗಲಿ ಎನ್ನುವ ಸರಕಾರದ ನಿರ್ಧಾರವನ್ನು ಸ್ವಾಮಿಜಿ ಸ್ವಾಗತಿಸಿದ್ದಾರೆ. ಇನ್ನು ಮುಂಬರುವ ದಿನಗಳಲ್ಲಿ ಸರಕಾರ ಈ ಕುರಿತಂತೆ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.

Tags:

error: Content is protected !!