ಎಂಕೆ ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಗ್ರಾಮಸ್ಥರಿಗೆ ಸುಳ್ಳು ಹೇಳಿ ಹಿಂದುಳಿದ ಜನಾಂಗದ 165 ವ್ಯಕ್ತಿಗಳ ಮೇಲೆ ಸಾಲವನ್ನು ಪಡೆದುಕೊಂಡು ಹಿಂದುಳಿದ ಜನಾಂಗದ ಜನಾಂಗದವರನ್ನು ವಂಚನೆ ಮಾಡಿದ್ದಾರೆ. ಹಾಗಾಗಿ ಕಾರ್ಖಾನೆ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಂಡು, ನೊಂದ ಹಿಂದುಳಿದ ಸಮುದಾಯದ ವ್ಯಕ್ತಿಗಳಿಗೆ ನ್ಯಾಯ ಒದಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಎಂಕೆ ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರು 165ಜನ ಹಿಂದುಳಿದ ವರ್ಗದವರ ಬ್ಯಾಂಕ್ ದಾಖಲೆ ಹಾಗೂ ಆಧಾರ್ ಕಾರ್ಡ್ ಪಡೆದು ಅವರ ಮೇಲೆ ತಲಾ 8ಲಕ್ಷದಂತೆ ಒಟ್ಟು 16ಕೋಟಿ ರೂ ಸಾಲ ಪಡೆದು ಎಸ್‍ಸಿ ಸಮುದಾಯದವರನ್ನು ವಂಚಿಸಿದ್ದಾರೆ. ಇನ್ನು ನಿಮಗೆ ಸಾಲ ಕೊಡಿಸುತ್ತೇವೆ. ನಿಮ್ಮ ಮೇಲೆ ಎಲ್‍ಐಸಿ ಮಾಡಿಸುತ್ತೇವೆ, ನಿಮಗೆ ಸರಕಾರಿ ಎಲ್ಲಾ ಸೌಲಭ್ಯಗಳನ್ನು ಕೊಡಿಸುತ್ತೇವೆಂದು ಬಣ್ಣ ಬಣ್ಣದ ಮಾತುಗಳನ್ನು ಹೇಳಿ ನಮ್ಮ ದಾಖಲಾತಿಗಳನ್ನು ಪಡೆದುಕೊಂಡು ನಮ್ಮ ಮೇಲೆ ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾರೆ ಎಂದು ಆರೋಪಿಸಿ 165ಜನ ತಮಗೆ ನ್ಯಾಯ ಕೊಡಿಸಬೇಕೆಂದು ಬೆಳಗಾವಿಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನೊಂದ ಮಹಿಳೆಯೊಬ್ಬರು, ಎಂಕೆ ಹುಬದ್ಬಳ್ಳಿ ಸಕ್ಕರರೆ ಕಾರ್ಖಾನೆಯವರು ಎಸ್‍ಸಿ ಜನಾಂಗದ ವ್ಯಕ್ತಿಗಳಿಗೆ ಇಲ್ಲ ಸಲ್ಲದ ಆಸೆಗಳನ್ನು ತೋರಿಸಿ ತುಳಿತಕ್ಕೆ ಒಳಗಾವ ಸಮುದಾಯದ ವ್ಯಕ್ತಿಗಳ ಹೆಸರಿನ ಮೇಲೆ ತಲಾ 8ಲಕ್ಷ ರೂಪಾಯಿ ಸಾಲ ಪಡೆದು ಹಿಂದುಳಿದ ವರ್ಗದವರಿಗೆ ಅನ್ಯಾಯ ಮಾಡಿದ್ದಾರೆ. ಇನ್ನು ಈ ಕಾರ್ಯದಲ್ಲಿ ಬ್ಯಾಂಕ್ ಅಧಿಕಾರಿಗಳೂ ಕೂಡ ಶಾಮೀಲಾಗಿ ರೈತರ ಮನೆಗೇ ತೆರಳಿ ಅವರಿಂದ ಸಹಿ ಹಾಕಿಸಿಕೊಂಡು ಅವರ ಹೆಸರಿನಲ್ಲಿ ಸಾಲ ಪಡೆದು ಅನ್ಯಾಯ ಮಾಡಿದ್ದಾರೆ. ಈ ಕುರಿತಂತೆ ಕಾರ್ಖಾನೆ ಚೇರ್‍ಮೆನ್ ನಾಸಿರ್ ಬಾಗವಾನ್‍ರನ್ನು ಕೇಳಿದರೆ ಸೇವೆ ಮಾಡಲು ಕೊಟ್ಟಿದ್ದೇವೆ ಎಂದು ಹೇಳಿ ಎಂದು ಉಡಾಪೆ ಉತ್ತರಗಳನ್ನು ನೀಡುತ್ತಿದ್ದಾರೆ. ಹಾಗಾಗಿ ಕೂಡಲೇ ಒಂದು ವಾರದೊಳಗಾಗಿ ಸಾಲವನ್ನು ಮರುಪಾವತಿ ಮಾಡಿ ಸಮಸ್ಯೆ ಪರಿಹಾರ ಮಾಡದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಮಾತನಾಡಿದ ಎಂಕೆ ಹುಬ್ಬಳ್ಳಿಯ ಗ್ರಾಮಸ್ಥರಾದ ಕಲ್ಲಪ್ಪ ಚಲವಾದಿ, ಕೊವಿಡ್ ಇರೋದ್ರಿಂದ ನಿಮಗೆ ಸಹಾಯ ಮಾಡುತ್ತೇವೆಂದು ನಮ್ಮ ದಾಖಲಾತಿಯನ್ನು ಪಡೆದು ನಮ್ಮ ಮೇಲೆ ಬ್ಯಾಂಕುಗಳಲ್ಲಿ 8ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ. ಇನ್ನು ಸಂಜು ಓಬಳೆಪ್ಪನವರ್ ಎಂಬವರು ತಮ್ಮ ಮನೆಯಲ್ಲಿಯೇ ಬ್ಯಾಂಕ್ ಅಧಿಕಾರಿಗಳನ್ನು ಕರೆಸಿ ನಮ್ಮ ಅಕೌಂಟ್ ಮಾಡಿಸಿ ವ್ಯವಸ್ಥಿತವಾಗಿ ಮೋಸ ಮಾಡಿದ್ದಾರೆ. ನನ್ನ ಮೇಲೆ ಬ್ಯಾಂಕಿನಲ್ಲಿ 8ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ಮಾತನಾಡಿದ ಎಂಕೆ ಹುಬ್ಬಳ್ಳಿಯ ಸುರೇಶ್ ಕೋಲಕಾರ್, ನಮ್ಮ ಓಣಿಯ ಪ್ರಮುಖರು ಸಂಜು ಓಬಳೆಪ್ಪನವರ್ ನಮ್ಮ ಮನೆಗೆ ಬಂದು ಸಹಾಯಧನ ನೀಡುವುದಾಗ ಹೇಳಿದರು. ನಮ್ಮಿಂದ ಆಧಾರ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಪಡೆದು ನಮಗೆ 8ಸಾವಿರ ರೂಪಾಯಿ ಸಹಾಯಧನ ಎಂದು ನೀಡಿದರು. ಆದರೆ ನಮ್ಮ ಹೆಸರಿನ ಮೇಲೆ ಬ್ಯಾಂಕಿನಲ್ಲಿ 8ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ. ನಮಗೆ ಯಾವುದನ್ನೂ ತಿಳಿಸದೇ ನಮಗೆ ಇಲ್ಲ ಸಲ್ಲದ ಆಶಯಗಳನ್ನು ಹುಟ್ಟಿಸಿ ನಮ್ಮ ಮೇಲೆ ಸಾಲ ಪಡೆದು ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಗ್ರಾಮಸ್ಥರು ತಮ್ಮ ಗ್ರಾಮ ಪ್ರಮುಖ ಸಂಜು ಓಬಳಪ್ಪನವರ್ ತಮ್ಮ ಮನೆಯಲ್ಲಿ ಬ್ಯಾಂಕ್ ಅಧಿಕಾರಿಗಳನ್ನು ಕರೆಸಿ ನಮ್ಮ ಅಕೌಂಟ್ ಮಾಡಿಸಿ ನಮ್ಮ ಹೆಸರಿನಲ್ಲಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯವರು ಸಾಲ ಪಡೆದಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತಮಗೆ ನ್ಯಾಯ ಕೊಡಿಸುವಂತೆ ಜಿಲ್ಲಾಧಿಕಾರಿಗಳ ಮೊರೆ ಹೋಗುದ್ದಾರೆ. ಇನ್ನು ಇದರ ಸತ್ಯಾಂಶವೇನೆಂದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ.