ಇವರೆಲ್ಲ ವರ್ಷಾನುಗಟ್ಟಲೆ ಅಲ್ಲೆ ಇಲ್ಲಿ ಚಿಂದಿ ಆರಿಸಿ ತಮ್ಮ ದಿನದ ಬದುಕನ್ನು ಕಟ್ಟಿಕೊಳ್ಳುವವರು. ತಮ್ಮ ಹೊಟ್ಟೆಗೆ ಬಟ್ಟಿಕಟ್ಟಿಕೊಂಡು ಅಷ್ಟು ಇಷ್ಟು ಹಣ, ಚಿನ್ನ ಮಾಡಿಕೊಂಡಿದ್ದರು. ಆದರೆ ಹೆತ್ತ ಮಗಳು ಇವೆಲ್ಲವನ್ನು ತೆಗೆದುಕೊಂಡು ಪ್ರೀಯಕರಣ ಜೊತೆ ಪರಾರಿಯಾಗಿದ್ದಾಳೆ. ಇದಕ್ಕೆ ನೊಂದ ಪಾಲಕರು ಪೊಲೀಸ್ ಠಾಣೆಗೆ ದೂರು ಕೊಡಲು ಹೋದರೆ ಅಲ್ಲಿನ ಪೊಲೀಸರು ಹಾಗೂ ಇನ್ಸ್ಪೆಕ್ಟರ್ ನಾಳೆ ಬಾ ಎಂದು ಬೋರ್ಡ್ ಹಾಕುತ್ತಿದ್ದಾರೆಂದು ಆ ನೊಂದ ಜೀವಗಳು ಆರೋಪ ಮಾಡುತ್ತಿದ್ದಾರೆ. ಅಷ್ಟಕ್ಕೂ ಅದೆನಪ್ಪಾ ಇಂತಹ ಸ್ಟೋರಿ ಅಂತಿರಾ ಇಲ್ಲಿದೆ ನೋಡಿ..

ಹೌದು…. ಹೀಗೆ ಕಣ್ಣೀರು ಹಾಕುತ್ತ, ಕೈಯಲ್ಲಿ ತಮ್ಮ ಮಗಳ ಪೋಟೋ ನಿಂತಿರುವ ಇವರು ಮಂಜುಳಾ ಹಾಗೂ ಭಗರಿಯಾ. ಧಾರವಾಡದ ಲಕ್ಷ್ ಸಿಂಗನಕೇರೆ ಗೋಸಾವಿ ಓಣಿಯ ನಿವಾಸಿಗಳು. ತಾಯಿ ಸುಮಾರು ವರ್ಷಗಳಿಂದ ಹೃದಯ ರೋಗದಿಂದ ಬಳಲುತಿದ್ದಾರೆ. ಇವರು ಚಿಂದಿ ಆರಿಸಿ ಜೀವನ ನಡೆಸುವವರು. ತಮ್ಮ ಮಗಳು ರೇಷ್ಮಾ ಕಿರಣ ಭೋಪಾಲ ಗೋಸಾವಿ ಎಂಬ ಮೂರು ಮದುವೆಯಾಗಿದ್ದ ವ್ಯಕ್ತಿಯ ಜೊತೆ ಮನೆಯಲ್ಲಿ ಚಿಕಿತ್ಸೆಗೆ ಇಟ್ಟಿದ್ದ ಹಣ, ಒಡವೆಯನ್ನು ತೆಗದುಕೊಂಡು ಹೋಗಿದ್ದಾಳೆ. ಇದರ ಬಗ್ಗೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ಕೊಡಲು ಹೋದರೆ ಅಲ್ಲಿದ್ದ ಪೊಲೀಸರು ಇನ್ಸ್ಪೆಕ್ಟರ್ ನಾಳೆ ಬನ್ನಿ ಎಂದು ಸುಮಾರು 15 ದಿನಗಳಿಂದ ಕಾಡಿಸುತ್ತಿದ್ದಾರೆಂದು ರೇಷ್ಮಾ ತಂದೆ ತಾಯಿ ಆರೋಪ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಈ ನೊಂದ ತಾಯಿಗೆ ಹೃದಯ ರೋಗದಿಂದ ಬಳಲುತ್ತಿದ್ದಾಳೆ. ಅತ್ತ ಮಗಳು ಚಿಕಿತ್ಸೆಗೆ ಮನೆಯಲ್ಲಿಟ್ಟಿದ್ದ ಹಣ ಮತ್ತು ಚಿನ್ನವನ್ನು ತೆಗೆದುಕೊಂಡು. ಹೋದರೆ ಇದಕ್ಕೆ ಸಂಬಂಧಿಸಿದ ಧಾರವಾಡ ವಿದ್ಯಾಗಿರಿ ಪೊಲೀಸರು ಈ ಬಡವರ ದೂರ ತೆಗೆದುಕೊಂಡು ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕಾಗಿದೆ…..