ಬೆಳಗಾವಿಯ ದಕ್ಷ ಡಿಸಿಪಿ ಎಂದೇ ಪ್ರಖ್ಯಾತಿ ಪಡೆದಿದ್ದ ಡಾ.ವಿಕ್ರಮ್ ಆಮ್ಟೆ ವರ್ಗಾವಣೆ ಆಗಿದ್ದು. ನೂತನ ಡಿಸಿಪಿ ಆಗಿ ರವೀಂದ್ರ ಗಡಾದಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮೊನ್ನೆಯಷ್ಟೇ ನಗರ ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್ ಅವರನ್ನು ವರ್ಗಾವಣೆ ಮಾಡಿ, ನೂತನ ನಗರ ಪೊಲೀಸ್ ಆಯುಕ್ತರಾಗಿ ಡಾ.ಎಂ.ಬಿ.ಬೋರಲಿಂಗಯ್ಯ ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ಡಿಸಿಪಿ ಡಾ.ವಿಕ್ರಮ್ ಆಮ್ಟೆ ಅವರನ್ನು ವರ್ಗಾವಣೆ ಮಾಡಿ ರವೀಂದ್ರ ಗಡಾದಿ ಅವರನ್ನು ನೂತನ ಡಿಸಿಪಿಯಾಗಿ ನೇಮಕ ಮಾಡಲಾಗಿದೆ. ಡಿಸಿಪಿ ಆಮ್ಟೆ ಅವರು ದಕ್ಷ ಪೊಲೀಸ್ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದು. ಮಟಕಾ, ಜೂಜು ಸೇರಿದಂತೆ ಮುಂತಾದ ಅಪರಾಧ ಪ್ರಕರಣಗಳನ್ನು ಮಟ್ಟ ಹಾಕಿದ್ದರು.