Belagavi

ಡಾ.ಕೆ.ತ್ಯಾಗರಾಜನ್‍ಗೆ ಆತ್ಮೀಯ ಬಿಳ್ಕೊಡುಗೆ: ಪೊಲೀಸರು, ಸಾರ್ವಜನಿಕರಿಂದ ಸತ್ಕಾರ

Share

ಬೆಳಗಾವಿ ನಗರಕ್ಕೆ ನೂತನ ನಗರಪೊಲೀಸ್ ಆಯುಕ್ತರಾಗಿ ಡಾ. ಬೋರಲಿಂಗಯ್ಯ ನೇಮಕವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದಿನ ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ರವರಿಗೆ ಬಿಳ್ಕೊಡುಗೆ ಹಾಗೂ ನೂತನ ನಗರ ಪೊಲೀಸ್ ಆಯುಕ್ತರಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಗಾವಿಯ ನೆಹರುನಗರದ ಜೀರಿಗೆಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ನಗರಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯರವರಿಗೆ ಸ್ವಾಗತ ಹಾಗೂ ಹಿಂದಿನ ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್‍ರವರಿಗೆ ಬಿಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಗರದ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಈ ಇಬ್ಬರೂ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಡಾ.ಬೋರಲಿಂಗಯ್ಯ ತ್ಯಾಗರಾಜನ್ ಸರ್ ಅವರದ್ದು 2006ನೇ ಬ್ಯಾಚ್ ನಂದು 2008ನೇ ಬ್ಯಾಚ್. ಕಲಬುರ್ಗಿ ಜಿಲ್ಲೆಯಲ್ಲಿ ಕ್ರೈಮ್ ವಿಭಾಗದ ಪ್ರೊಬೇಷನರಿಯಾಗಿದ್ದೆ, ಆ ವೇಳೆ ತ್ಯಾಗರಾಜನ್ ಸರ್ ಅವರು ಹುಮನಾಬಾದ್‍ನ ಎಎಸ್‍ಪಿ ಆಗಿದ್ದರು. ಈ ವೇಳೆ ಗವರ್ನರ್ ಭೇಟಿ ಕೊಟ್ಟಿದ್ದರು, ಆಗ ನಾನು ಎಸ್‍ಪಿ ಅವರ ಜೊತೆಗೆ ಹೋದಾಗ ತ್ಯಾಗರಾಜನ್ ಅವರನ್ನು ನೋಡಿದ್ದೆ. ತ್ಯಾಗರಾಜನ್ ಸರ್ ಅವರು ಯಾವ ರೀತಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂಬುದಕ್ಕೆ ಇಲ್ಲಿ ಎಲ್ಲರೂ ಮಾತಾಡಿದ್ದೆ ಒಂದು ನಿದರ್ಶನವಾಗಿದೆ. 2024 ಜನವರಿಗೆ ತ್ಯಾಗರಾಜನ್ ಅವರು ಐಜಿಪಿ ಆಗಿ ಬಡ್ತಿ ಪಡೆಯಲಿದ್ದಾರೆ. ಮುಂದೆ ಇನ್ನು ದೊಡ್ಡ ಹುದ್ದೆಗಳನ್ನು ಅವರು ಅಲಂಕರಿಸಿ ಉತ್ತಮವಾಗಿ ಕಾರ್ಯನಿರ್ವಹಿಸುವಂತಾಗಲಿ, ದೇವರು ಅವರಿಗೆ ಆಯುಷ್ಯ, ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಈ ವೇಳೆ ಮಾತನಾಡಿದ ಕೆ. ತ್ಯಾಗರಾಜನ್‍ರವರು, ಬೆಳಗಾವಿ ನಗರದಲ್ಲಿ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸ್ವತಂತ್ರವಾಗಿ ನಿಧಾರವನ್ನು ತೆಗೆದುಕೊಂಡು ನಮಗೆ ತಿಳಿಸುವಂತೆ ಹೇಳಲಾಗಿತ್ತು. ಅದರ ಪರಿಣಾಮ ನಗರದಲ್ಲಿ ಉತ್ತಮ ಆಡಳಿತ ನೀಡಲು ಸಾಧ್ಯವಾಯಿತು. ಹಗಾಗಿ ನಾವೆಲ್ಲ ಉತ್ತಮವಾಗಿ ಕಾಯ್ ನಿರ್ವಹಿಸಿದ ಶ್ರೇಯಸ್ಸು ಸಹೋದ್ಯೋಗಿಗಳಾದ ನಿಮಗೆ ಸಲ್ಲುತ್ತದೆ ಎಂದು ಶ್ರೇಯಸ್ಸಿನ ಪರಿಶ್ರಮವನ್ನು ಕಿರಿಯ ಪೊಲೀಸ್ ಅಧಿಕಾರಿಗಳಿಗೆ ನೀಡಿದರು.

ಇನ್ನು ಕಾರ್ಯಕ್ರಮದಲ್ಲಿ ಸಿಎಆರ್ ಎಸ್‍ಪಿ ಸಿದ್ಧನಗೌಡ ಪಾಟೀಲ್, ಡಿಸಿಪಿಗಳಾದ ಡಾ. ವಿಕ್ರಮ್ ಆಮ್ಟೆ, ಪಿ.ವಿ ಸ್ನೇಹಾ, ಎಸಿಪಿಗಳಾದ ನಾರಾಯಣ ಭರಮನಿ, ಚಂದ್ರಪ್ಪ, ಸದಾಶಿವ ಕಟ್ಟಿಮನಿ, ಕರವೇ ಜಿಲ್ಲಾಧ್ಯಕ್ಷರಾದ ದೀಪಕ್ ಗುಡಗನಟ್ಟಿ, ವಾಲ್ಮೀಕಿ ಸಮುದಾಯದ ಮುಖಂಡ ರಾಜಶೇಖರ್ ತಳವಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

 

Tags:

error: Content is protected !!