Chikkodi

ಟ್ರಾಕ್ಟರ್ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಕಳ್ಳರನ್ನ ಥಳಿಸಿದ ಗ್ರಾಮಸ್ಥರು

Share

ಟ್ರಾಕ್ಟರ್ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಇಬ್ಬರೂ ಖದೀಮರನ್ನು ಗ್ರಾಮಸ್ಥರು ಥಳಿಸಿದ ಘಟಣೆ ರಾಯಬಾಗ ತಾಲೂಕಿನಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನ ಸವದತ್ತಿ ಗ್ರಾಮದಲ್ಲಿ ಟ್ರಾಕ್ಟರ್ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಗ್ರಾಮಸ್ಥರು ಥಳಿಸಿದ ಘಟಣೆ ನಡೆದಿದ್ದು, ಬಾವನ ಸವದತ್ತಿ ಗ್ರಾಮದ ಅಶೋಕ ಗೋಕಾವಿ ಹಾಗೂ ಸುಧಾಕರ ಚಂಪೂ ಇವತ್ತು ಬೆಳಗಿನ ಜಾವ ಮನೆ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್ ಬ್ಯಾಟರಿ ಕಳ್ಳತನ ಮಾಡುತ್ತಿದ್ದ, ಖದೀಮರು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಹಲವು ದಿನಗಳಿಂದ ನಿರಂತರವಾಗಿ ಕಳ್ಳತನ ಮಾಡುತ್ತಲೇ ಇದ್ದ ಖದೀಮರು ಇಂದು ಬೆಳಗಿನ ಜಾವ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದು, ಗ್ರಾಮದ ಮಧ್ಯೆ ಕಂಬಕ್ಕೆ ಕಟ್ಟಿಹಾಕಿ ಗ್ರಾಮಸ್ಥರಿಂದ ಧರ್ಮದೇಟು ನೀಡಿ ಬಳಿಕ ರಾಯಬಾಗ ಪೆÇಲೀಸರಿಗೆ ಕಳ್ಳರನ್ನ ಒಪ್ಪಿಸಿದ್ದಾರೆ.

Tags:

error: Content is protected !!