ಟೆಸ್ಟ್ ನಾಯಕತ್ವಕ್ಕೂ ವಿರಾಟ್ ಕೊಹ್ಲಿ ಗೂಡ್ ಬೈ ಹೇಳಿದ್ದಾರೆ.

ಹೌದು ಈಗಾಗಲೇ ಏಕದಿನ ಹಾಗೂ ಟಿ-20ಗೆ ನಿವೃತ್ತಿ ಘೋಷಿಸಿದ್ದ ವಿರಾಟ್ ಕೊಹ್ಲಿ ಇದೀಗ ದಕ್ಷಿಣ ಆಫಿಕ್ರಾ ವಿರುದ್ಧ ಟೆಸ್ಟ ಸರಣಿ ಸೋತ ಹಿನ್ನೆಲೆ ಟೆಸ್ಟ್ ನಾಯಕತ್ವಕ್ಕೂ ನಿವೃತ್ತಿ ಘೋಷಿಸಿದ್ದಾರೆ. ಸುದೀರ್ಘ ಅವಧಿವರೆಗೆ ಅವಕಾಶ ನೀಡಿದ್ದಕ್ಕೆ ಬಿಸಿಸಿಐಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
68 ಟೆಸ್ಟ್ ಪಂದ್ಯಗಳಲ್ಲಿ ತಂಡದ ಸಾರಥ್ಯವಹಿಸಿದ್ದ ವಿರಾಟ್ ಕೊಹ್ಲಿ 40 ಟೆಸ್ಟ್‌ಗಳಲ್ಲಿ ಟೀಮ್ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಇನ್ನು 17 ಟೆಸ್ಟ್‌ಗಳಲ್ಲಿ ಸೋತರೆ 11 ಪಂದ್ಯಗಳು ಡ್ರಾ ಆಗಿವೆ. ಈ ಮೂಲಕ ಟೀಮ್ ಇಂಡಿಯಾ ಇತಿಹಾಸದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎನಿಸಿಕೊಂಡಿದ್ದಾರೆ ವಿರಾಟ್ ಕೊಹ್ಲಿ.