Belagavi

ಜನಪ್ರಿಯ ಡಿಸಿಪಿಗೆ ಆತ್ಮೀಯ ಬಿಳ್ಕೊಡುಗೆ: ಮತ್ತೆ ಬೆಳಗಾವಿಗೆ ಬರುತ್ತೇನೆ ಎಂದ ಆಮ್ಟೆ

Share

ಬೆಳಗಾವಿ ಪೊಲೀಸ್ ಕಮಿಶನರೇಟ್ ಘಟಕದ ವತಿಯಿಂದ ಬೆಳಗಾವಿಯ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿಯಾಗಿ ಕಾರ್ಯ ನಿರ್ವನಿರ್ವಸಿ ವರ್ಗಾವಣೆಗೊಂಡ ಹಿರಿಯ ಪೊಲೀಸ್ ಅಧಿಕಾರಿ ಡಾ. ವಿಕ್ರಮ್ ಆಮ್ಟೆರವರಿಗೆ ಬಿಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಕುಂದಾನಗರಿ ಬೆಳಗಾವಿಯ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ಡಿಸಿಪಿ ಡಾ ವಿಕ್ರಮ್ ಆಮ್ಟೆ ರವರಿಗೆ ಇಂದು ಬಿಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಡಿಸಿಪಿ ಪಿ.ವಿ. ಸ್ನೇಹಾ ಡಾ ವಿಕ್ರಮ್ ಆಮ್ಟೆ ಕಾರ್ಯವೈಖರಿ ನಮಗೆಲ್ಲ ಆದರ್ಶವಾಗಿದೆ. ಕಾರ್ಯನಿರ್ವಗಣಾ ಸಂದರ್ಭದಲ್ಲಿ ಆಮ್ಟೆರವರು ರಾಜಕೀಯ ವ್ಯಕ್ತಿಗಳು ಹಾಗೂ ಮಾಧ್ಯಮಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಎಲ್ಲಾ ವತ್ತಡಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದ ಇವರನ್ನು ನನ್ನ ಬ್ಯಾಚ್‍ಮೆಂಟ್ ಎಂದು ಹೇಳಿಕೊಳ್ಳುವುದು ಹೆಮ್ಮೆ ಎನಿಸುತ್ತಿದೆ. ಇನ್ನು ಶಿವಮೊಗ್ಗ ಜಿಲ್ಲೆಯ ಹೆಚ್ಚುವರಿ ಎಸ್‍ಪಿಯಾಗಿ ತೆರಳುತ್ತಿದ್ದಾರೆ. ಹಾಗಾಗಿ ಅವರಿಗೆ ಶುಭಾಶಯಗಳನ್ನು ಕೋರುತ್ತೇನೆ ಎಂದರು.

ಈ ಸಂದರ್ಭದಲ್ಲಿ ಬೆಳಗಾವಿಯ ನಗರಪೊಲೀಸ್ ಆಯುಕ್ತರಾದ ಡಾ. ಬೋರಲಿಂಗಯ್ಯ, ಡಿಸಿಪಿ ಡಾ. ವಿಕ್ರಮ್ ಆಮ್ಟೆ, ಡಿಸಿಪಿ ರವೀಂದ್ರ ಗಡಾದಿ, ಸೇರಿದಂತೆ ಹಲವಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Tags:

error: Content is protected !!