Chikkodi

ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಮಹಾಂತೇಶ ಕವಟಗಿಮಠ

Share

ಚಿಕ್ಕೋಡಿ ತಾಲೂಕಿನ ನಣದಿ ಗ್ರಾಮದ ಬಳಿಯಲ್ಲಿ ನೀರಾವರಿ ಇಲಾಖೆಯಿಂದ ಮಂಜೂರಾದ 1 ಕೋಟಿ ರೂಪಾಯಿ ಅನುದಾನದಲ್ಲಿ ಹಳ್ಳಕ್ಕೆ ಬ್ರಿಡ್ಜ್ ಕಮ್ ಬಾಂದಾರ್ ಹಾಗೂ ಹಿರೇಕೋಡಿ ಗ್ರಾಮದಲ್ಲಿ 60 ಲಕ್ಷ ರೂಪಾಯಿ ಅನುದಾನದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ವಿಧಾನ ಪರಿಷತ್ತ್ ಸದಸ್ಯ ಮಹಾಂತೇಶ ಕವಟಗಿಮಠ ಚಾಲನೆ ನೀಡಿದರು.

 ಚಿಕ್ಕೋಡಿ ತಾಲ್ಲೂಕಿನ ನಣದಿ ಗ್ರಾಮದ ಹಳ್ಳಕ್ಕೆ ಕಳೆದ ಹಲವು ವರ್ಷಗಳಿಂದ ಬ್ರಿಡ್ಜ್ ಕಮ್ ಬಾಂದಾರ ಇಲ್ಲದೇನೇ ಈ ಭಾಗದ ರೈತರು ಕಬ್ಬು ಸಾಗಾಟ ಮಾಡಲು ತೀವ್ರ ತೊಂದರೆ ಪಡುವಂತಾಗಿದ್ದು, ಅμÉ್ಟೀ ಅಲ್ಲದೇ, ತೋಟದ ವಸತಿ ಪ್ರದೇಶದಲ್ಲಿ ವಾಸವಾಗಿರೋ ಜನರು ಕೂಡ ಸಾಕಷ್ಟು ತೊಂದರೆ ಪಡುತ್ತಿದ್ದರು. ಇದನ್ನು ಗಮನಿಸಿಯೇ ನೀರಾವರಿ ಇಲಾಖೆಯಿಂದ 1 ಕೋಟಿ ರೂಪಾಯಿ ಅನುದಾನದಲ್ಲಿ ಬ್ರಿಡ್ಜ್ ಕಮ್ ಬಾಂದಾರ ನಿರ್ಮಾಣ ಕಾಮಗಾರಿಯನ್ನು ಮಹಾಂತೇಶ ಕವಟಗಿಮಠ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಿ ಎನ್ ನಿಂಬಾಳಕರ, ದೇಸಾಯಿ, ಚಂದ್ರಕಾಂತ ಕೋಕನೆ, ಅಭಿಜೀತ ನಸೋಲನ್ನವರ, ರವಿ ಭಿವಶಿ, ಮಹೇಶ ಬಾಕಳೆ, ಸತೀಶ ಶಾಸ್ತ್ರಿ, ಸುರೇಶ ಖೋತ, ರಂಜೀತ ಪವಾರ ಇದ್ದರು. ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಹಾಂತೇಶ ಕವಟಗಿಮಠ ಅವರು ಮಾತನಾಡಿ, ಇಂತಹ 100 ಬ್ರಿಡ್ಜ್ ಕಮ್ ಬಾಂದಾರಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು, ಇದೀಗ 30 ಬ್ರಿಡ್ಜ್ ಕಮ್ ಬಾಂದಾರಗಳನ್ನು ನಿರ್ಮಾಣ ಮಾಡಲಾಗಿದ್ದು, ಇನ್ನು ಅವಕಾಶ ದೊರೆತಲ್ಲಿ ನಿಗದಿತ ಗುರಿ ತಲುಪವುದಾಗಿ ಹೇಳಿದರು.

 

Tags:

error: Content is protected !!