ಚಿಕ್ಕೋಡಿ ಕೆ.ಎಲ್.ಇ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಸ್ತಕ 2021-2022ರ ಶೈಕ್ಷಣಿಕ ಸಾಲಿನಿಂದ ಎಂಬಿಎ ಪ್ರವೇಶಾತಿ ಆರಂಭವಾಗಿದ್ದು, ಜನೇವರಿ 7ರಂದು ಕಾರ್ಯಕ್ರಮ ಉದ್ಘಾಟನೆ ಆಗಲಿದೆ ಎಂದು ಕೆಎಲ್‍ಇ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಪ್ರಸಾದ್ ರಾಮಪೂರ ಹೇಳಿದರು.

ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಕೆಎಲ್.ಇ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಪ್ರಸಾದ್ ರಾಮಪೂರ ಅವರು, ಚಿಕ್ಕೋಡಿ ವಿಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಗೆ ಹೆಸರಾಗಿರುವ ಕೆ.ಎಲ್.ಇ ಸಂಸ್ಥೆ ಪ್ರಸ್ತುತ ವರ್ಷದಿಂದ ಎಂಬಿಎ ಶಿಕ್ಷಣ ಪ್ರಾರಂಭ ಮಾಡುತ್ತಿದೆ. ಈ ಮೊದಲು ಈ ಭಾಗದ ವಿದ್ಯಾರ್ಥಿಗಳು ಎಂಬಿಎ ಶಿಕ್ಷಣಕ್ಕಾಗಿ ಬೆಳಗಾವಿ, ಬೆಂಗಳೂರಿಗೆ ಸೇರಿದಂತೆ ಇತರ ಕಡೆಗೆ ಹೋಗುತ್ತಿದ್ದರು. ಹೀಗಾಗಿ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲೂ ಚಿಕ್ಕೋಡಿಯ ಕೆಎಲ್‍ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ 2021-22ನೇ ಸಾಲಿನಿಂದ 2 ವರ್ಷಗಳ ಸ್ನಾತಕೋತ್ತರ ಪದವಿ ಎಬಿಎ ಕೋರ್ಸನ್ನು 60 ಇಂಟೆಕ್‍ನೊಂದಿಗೆ ಆರಂಭಿಸಿದ್ದೇವೆ. ಈ ಕೋರ್ಸ್ ಬೆಳಗಾವಿಯ ವಿಟಿಯು ಸಹಯೋಗ ಹೊಂದಿದೆ. ಇದೇ ಜ.7ರಂದು ಉದ್ಘಾಟನೆ ಕಾರ್ಯಕ್ರಮ ನೆರವೇರಿಲಿದೆ ಎಂದರು.
ಎಂಬಿಎ ವೈಶಿಷ್ಟ್ಯತೆಗಳು: ಪರಿಣಿತ ಅನುಭವಿ ಸಿಬ್ಬಂದಿಗಳು, ವಾಲ್ಯೂ ಆಡೆಡ್ ಸರ್ಟಿಫಿಕೆಟ್ ಕೊರ್ಸ ಮಾಡಿಸುತ್ತೇವೆ (ಬ್ಯಾಂಕಿಂಗ್, ಡಿಜಿಟಲ್ ಮಾರ್ಕೆಟಿಂಗ್, ಜರ್ಮನ, ಫ್ರೆಂಚ್ ಭಾμÁ ಕೊರ್ಸ, ಕಾಲೇಜಿನಲ್ಲಿ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿಷ್ಯವೇತನ ಘಟಕ ನಿರ್ಮಾಣ, ನೇಮಕಾತಿ ಘಟಕದ ವತಿಯಿಂದ ಒಳ್ಳೆಯ ಪ್ಲೆಸಮೆಂಟ್, ಡೊಮೆಸ್ಟಿಕ್ ಇಂಡಸ್ಟ್ರೀಯಲ್ ವಿಜೆಟ್ಸ್, ಉಚಿತ ಬಸ್ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ. ಕೆಎಲ್‍ಇ ವೈದ್ಯಶ್ರೀ ಆರೋಗ್ಯ ಸೇವೆ ಒದಗಿಸಲಾಗುತ್ತದೆ ಎಂದರು.
ಬೈಟ್