ಚಿಕ್ಕೊಡಿಯ ಕೆ. ಎಲ್. ಇ. ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ನಿಮಿತ್ತ ದಿನ ಜಾಥಾ ಕಾರ್ಯಕ್ರಮ ಎರ್ಪಡಿಸಲಾಯಿತು.

ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಾಚಾರ್ಯ ಡಾ. ಪ್ರಸಾದ ರಾಂಪೂರೆ –ನಮ್ಮ ಸುರಕ್ಷತೆ, ನಮ್ಮ ಜವಾಬ್ದಾರಿ. ವೇಗದ ಮೀತಿ ಇರಲಿ, ಅವಸರ ಮಾಡದೇ ವಾಹನ ಚಲಾಯಿಸಿ. ಸಾಮಾನ್ಯವಾಗಿ ಹದಿಹರೆಯದ ವಿದ್ಯಾರ್ಥಿಗಳಿಂದಲೇ ಅಪಘಾತಗಳು ಸಂಭವಿಸುತ್ತಿವೆ. ಇಂದು ವಾಹನ ಚಾಲನೆ ಮಾಡುವಾಗ ಮೋಬೈಲ್ ಬಳಕೆ ಸಾಮಾನ್ಯವಾಗಿದೆ ಇದರಿಂದಾಗಿ ಅಫಘಾತವಾಗುತ್ತಿದೆ.
ಚಿಕ್ಕೋಡಿಯ ಬಸವೇಶ್ವರ ವೃತ್ತದಿಂದ ಕೆ. ಸಿ. ರಸ್ತೆ ಮಾರ್ಗವಾಗಿ ಬಸ್ಸ್ ನಿಲ್ದಾಣದವರೆಗೆ ವಿದ್ಯಾರ್ಥಿಗಳಿಂದ ಜಾಥಾ ಕೈಗೊಂಡರು. ಈ ಸಂದರ್ಭದಲ್ಲಿ ಸಿಟಬೆಲ್ಟ್ ಹಾಕಿದ, ಹೆಲ್ಮೆಟ್ ಧರಿಸಿದ ಚಾಲಕರಿಗೆ ಗುಲಾಬಿ ಹೂ ನೀಡಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಟ್ರಾಫಿಕ್ ಪಿಎಸ್‍ಐ ಎ. ಟಿ ಅಮ್ಮನಭಾವಿ, ಎಎಸ್‍ಐ ಎಸ್ ಆರ್ ಪಾಟೀಲ, ಎಸ್ ಎಮ್ ಕಮತಗಿ ವಿಭಾಗ ಮುಖ್ಯಸ್ಥರಾದ ಪ್ರೊ. ಪ್ರದೀಪ ಹೊದ್ಲೂರ, ಪ್ರೊ. ಸವೀತಾ ಮಾಳಿ, ಪ್ರೊ. ಶಂಕರಗೌಡಾ ಪಾಟೀಲ, ಪ್ರೊ. ಸುಶೀಲಕುಮಾರ ಭಗಾಟೆ, ಪ್ರೊ. ಪೂಜಾ ಹೆಗಜೆ, ಪ್ರೊ. ಬಾಳಪ್ಪಾ ನವಲಾಯಿ, ಪ್ರೊ. ವಿನಯ ಮನಗೂಳೆ ಉಪಸ್ಥಿತರಿದ್ದರು.