Chikkodi

ಚಿಕ್ಕೋಡಿಯಲ್ಲಿ ಬೂಸ್ಟರ್ ಡೋಸ್ ಅಭಿಯಾನಕ್ಕೆ ಶಾಸಕ ಗಣೇಶ ಹುಕ್ಕೇರಿ ಚಾಲನೆ

Share

ದೇಶದಲ್ಲಿ ಓಮಿಕ್ರಾನ್ ವೈರಸ್ ತೀವ್ರಗತಿಯಲ್ಲಿ ಹರಡುತ್ತಿರುವ ಕಾರಣ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಅದೇ ರೀತಿ ಚಿಕ್ಕೋಡಿಯಲ್ಲಿಯೂ ಬೂಸ್ಟರ್ ಡೋಸ್ ಅಭಿಯಾನ ಆರಂಭವಾಗಿದೆ.

ಚಿಕ್ಕೋಡಿ ಜಿಲ್ಲಾ ಆಸ್ಪತ್ರೆಯಲ್ಲಿ ಶಾಸಕ ಗಣೇಶ ಹುಕ್ಕೇರಿಯವರ ನೇತೃತ್ವದಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಡಾ.ಶಂಕರ ಸಗರೆ ಹಾಗೂ ಅವರ ಶ್ರೀಮತಿಗೆ ಲಸಿಕೆ ಹಾಕುವ ಮೂಲಕ ಬೂಸ್ಟರ್ ಡೋಸ್ ಲಸಿಕಾಕರಣಕ್ಕೆ ಚಾಲನೆ ನೀಡಲಾಯಿತು. ಎರಡನೇ ಡೋಸ್ ಪಡೆದು 9 ತಿಂಗಳು ಪೂರ್ಣಗೊಂಡ ಬಳಿಕವμÉ್ಟೀ ಬೂಸ್ಟರ್ ನೀಡಿ ಹಾಗೂ ಇದೇ ತಿಂಗಳ 26ನೇ ತಾರಿಖಿನೊಳಗೆ ಶೇಕಡಾ 100 ರಷ್ಟು ಬೂಸ್ಟರ್ ಡೋಸ್ ಲಸಿಕಾಕರಣವನ್ನು ಪೂರ್ತಿಗೊಳಿಸುವಂತೆ ಶಾಸಕರು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಆರೋಗ್ಯ ರಕ್ಷಾ ಸಮಿತಿಯ ಅನುದಾನದಲ್ಲಿ ಮಾಡಿದ ಸುಮಾರು 30 ಲಕ್ಷ ರೂಪಾಯಿಗಳ ಖರ್ಚು ವೆಚ್ಚಿನ ಬಗ್ಗೆ ಮಾಹಿತಿ ಪಡೆದ ಶಾಸಕರು ಆಸ್ಪತ್ರೆಯಲ್ಲಿ ಅವಶ್ಯಕತೆಯಿರುವ ವಿಷಯಗಳ ಬಗ್ಗೆ ಚರ್ಚಿಸಿದರು. ಮಹಿಳಾ ಸಿಬ್ಬಂದಿಗಳ ಹಾಗೂ ರೋಗಿಗಳ ಭದ್ರತೆಗಾಗಿ ಸೆಕ್ಯೂರಿಟಿ ಗಾರ್ಡ ಗಳನ್ನು ನೇಮಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇನ್ನೊಂದು ವಾರದಲ್ಲಿ ಶಾಸಕರ ಅನುದಾನದ ಅಡಿ 20 ಲಕ್ಷ ರೂಪಾಯಿ ಗಳನ್ನು ಆಸ್ಪತ್ರೆಗೆ ನೀಡಲಾಗುವುದು ಹಾಗೂ ಜಿಲ್ಲಾ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿ ಮಾಡಲು ಅನ್ನಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ ಸುಮಾರು 50 ಲಕ್ಷ ರೂಪಾಯಿಗಳನ್ನು ನೀಡಲಾಗುವುದೆಂದು ಶಾಸಕ ಗಣೇಶ ಹುಕ್ಕೇರಿ ಖಚಿತಪಡಿಸಿದರು.

ಇದೇ ವೇಳೆ ಆಸ್ಪತ್ರೆಯ ಆವರಣದಲ್ಲಿ ವಾಹನಗಳ ಪಾಕಿರ್ಂಗ್ ವ್ಯವಸ್ಥೆಯನ್ನು ಸುಧಾರಿಸಲು ಫ್ಲೇವರ್ ಬ್ಲಾಕ್‍ಗಳನ್ನು ಅಳವಡಿಸಲು ಸೂಚಿಸಿದರು. ಈ ಸಂದರ್ಭದಲ್ಲಿ ಉಪವಿಭಾಗಧಿಕಾರಿ ಸಂತೋಷ ಕಾಮಗೌಡ, ಎಡಿಎಚ್‍ಓ ಡಾ.ಎಸ್.ಎಸ್.ಗಡಾದ್, ತಾಲೂಕಾ ಆರೋಗ್ಯಧಿಕಾರಿ ಡಾ.ವಿಠ್ಠಲ ಶಿಂಧೆ, ಡಾ.ಸಂತೋಷ ಕೊಣ್ಣೂರೆ ಮತ್ತು ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Tags:

error: Content is protected !!