ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಧಾರವಾಡ ವಿದ್ಯಾವರ್ಧಕ ಸಂಘದಲ್ಲಿ ಶ್ರೀ ಚನ್ನವೀರಗೌಡ ಅಣ್ಣಾ ಶಿದ್ರಾಮಗೌಡ ಪಾಟೀಲ ಅವರ ಗ್ರಂಥ ಬಿಡುಗಡೆ ಮಾಡಿ ಟ್ರಸ್ಟ್ ಉದ್ಘಾಟಿಸಿದರು.

ಆರಂಭದಲ್ಲಿ ಚನ್ನವೀರಗೌಡ ಪಾಟೀಲ ಅವರ ಭಾವಚಿತ್ರಕ್ಕೆ ಸಿಎಂ ಬೊಮ್ಮಾಯಿ ಅವರು ಗೌರವ ಸಲ್ಲಿಸಿದರು. ನಂತರ ಚನ್ನವೀರಗೌಡ ಅಣ್ಣಾ ಪಾಟೀಲ ಅವರ ಗ್ರಂಥ ಬಿಡುಗಡೆ ಮಾಡಿ ಟ್ರಸ್ಟ್‍ನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ದೇವರ ಹುಬ್ಬಳ್ಳಿಯ ಶಿವಸಿದ್ದ ಶಿವಯೋಗಿ ಶ್ರೀಗಳು, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಶಾಸಕರಾದ ಚಂದ್ರಕಾಂತ ಬೆಲ್ಲದ್, ಎ.ಬಿ.ದೇಸಾಯಿ, ಮಾಜಿ ಸಚಿವ ಶಶಿಕಾಂತ ನಾಯಿಕ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.