Uncategorized

ಗೋವಾದಲ್ಲಿ ಬೆಳಗಾವಿಯ ಸ್ಕೇಟಿಂಗ್ ಪಟುಗಳ ಅತ್ಯುತ್ತಮ ಸಾಧನೆ

Share

ಬೆಳಗಾವಿ ಸ್ಕೇಟಿಂಗ್ ಪಟುಗಳು 2021ರ ಗೋವಾ ರೋಲರ್ ಸ್ಕೇಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಗೋವಾದ ಪಣಜಿಯಲ್ಲಿ ಇದೇ ಜನವರಿ 15 ಮತ್ತು 16ರಂದು ಮಿಶನ್ ಒಲಿಂಪಿಕ್ ಗೇಮ್ಸ ಅಸೊಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ 2021ರ ಗೋವಾ ರೋಲರ್ ಸ್ಕೇಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಬೆಳಗಾವಿಯ ಸ್ಕೇಟಿಂಗ್ ತಂಡ 2 ಚಿನ್ನ, 1 ಬೆಳ್ಳಿ, 13 ಕಂಚು ಸೇರಿ ಒಟ್ಟು 16 ಪದಕಗಳನ್ನು ಗೆದ್ದಿದೆ. ವಿದಿತ್ ಕಲ್ಯಾಣಕುಮಾರ್ 2 ಚಿನ್ನದ ಪದಕಗಳನ್ನು ಗೆದ್ದರೆ, ವರದ್ ಕೊಲಮಕರ್ 1 ಬೆಳ್ಳಿ, 1 ಕಂಚು, ಲಾವಣ್ಯ ಲೋಹಾರ 2 ಕಂಚು, ಧೃವ ಕುಲಕರ್ಣಿ 2 ಕಂಚು, ಪಲ್ಲವಿ ಪಾಟೀಲ್ 2 ಬೆಳ್ಳಿ, ವಂಶಿ ಲಾಡ್ 1 ಬೆಳ್ಳಿ, ಅಥರ್ವ ಭೂತೆ 1 ಕಂಚು, ಸೋಹನ್ ಹಿರೇಮಠ 1 ಕಂಚು, ಸಾಯಿಸಮರ್ಥ ಅಜಾನಾ 1 ಕಂಚು, ಶುಭಂ ಸಾಖೆ 2 ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇನ್ನು ಪದಕ ವಿಜೇತ ಸ್ಕೇಟಿಂಗ್ ಪಟುಗಳು ಈ ವೇಳೆ ಸಂತಸ ವ್ಯಕ್ತಪಡಿಸಿದ್ದು ಹೀಗೆ.

ಈ ಎಲ್ಲ ವಿಜೇತ ಸ್ಕೇಟಿಂಗ್ ಪಟುಗಳು ಕಳೆದ 3 ವರ್ಷಗಳಿಂದ ಕೆಎಲ್‍ಇ ಸೊಸೈಟಿಯ ಸ್ಕೇಟಿಂಗ್ ರಿಂಕ್, ರೋಟರಿ ಕಾರ್ಪೋರೇಶನ್ ಸ್ಪೋಟ್ರ್ಸ ಅಕಾಡೆಮಿ, ಗೂಡ್ ಶೇಪರ್ಡ ಸೆಂಟ್ರಲ್ ಶಾಲೆಯ ಇಂಟರನ್ಯಾಶನಲ್ ಸ್ಕೇಟಿಂಗ್ ಟ್ರ್ಯಾಕ್‍ನಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ಇವರಿಗೆ ಕೆಎಲ್‍ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ, ಮಾಜಿ ಶಾಸಕರಾದ ಶ್ಯಾಮ್ ಘಾಟಗೆ, ರಮೇಶ ಕುಡಚಿ, ರಾಜ್ ಘಾಟಗೆ, ಉಮೇಶ ಕಲಘಟಗಿ, ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೊಸಿಯೇಷನ್ ಅಧ್ಯಕ್ಷ ಪ್ರಸಾದ್ ತೆಂಡುಲ್ಕರ್, ಕೋಚ್ ಸೂರ್ಯಕಾಂತ ಹಿಂಡಲಗೇಕರ್ ಸೇರಿದಂತೆ ಇನ್ನಿತರರು ಅಭಿನಂದನೆ ಸಲ್ಲಿಸಿದ್ದಾರೆ.

Tags:

error: Content is protected !!