ಖಾನಾಪೂರ ತಾಲೂಕಿನ ಗೋಲಿಹಳ್ಳಿ ಆರ್‍ಎಫ್‍ಓ ಶ್ರೀನಾಥ್ ಕಡೋಲ್ಕರ ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರನ್ನು ಆತ್ಮೀಯವಾಗಿ ಸತ್ಕರಿಸಿ ಬಿಳ್ಕೊಡಲಾಯಿತು.

ಆರ್‍ಎಫ್‍ಓ ಶ್ರೀನಾಥ್ ಕಡೋಲ್ಕರ ಅವರು ಗೋಲಿಹಳ್ಳಿ ಆರ್‍ಎಫ್‍ಓ ಆಗಿ ಜುಲೈ 17ರಂದು ಅಧಿಕಾರ ಸ್ವೀಕರಿಸಿದ್ದರು. 2 ವರ್ಷ 5 ತಿಂಗಳು ಕಾಲಾವಧಿವರೆಗೆ ಈ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಿ ಈಗ ಕೆಎಫ್‍ಡಿಸಿ ಶಿರಶಿ ಉತ್ತರ ಕನ್ನಡ ಜಿಲ್ಲೆಗೆ ಸರ್ಕಾರದ ಆದೇಶದಂತೆ ವರ್ಗಾವಣೆ ಆಗಿದ್ದಾರೆ. ಇವರ ಕಾಲಾವಧಿಯಲ್ಲಿ ಗೋಲಿಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಬಹಳ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದರು. ವನ್ಯ ಜೀವಿಗಳ ರಕ್ಷಣೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದರು. ಗೋಲಿಹಳ್ಳಿ ಅರಣ್ಯ ಇಲಾಖೆಯ ಅಧಿಕಾರಿಗಳು ವರ್ಗಾವಣೆಗೊಂಡ ಶ್ರೀನಾಥ್ ಕಡೋಲ್ಕರ ಅವರನ್ನು ಸತ್ಕರಿಸಿ ಆತ್ಮೀಯವಾಗಿ ಬಿಳ್ಕೊಟ್ಟರು. ನೂತನವಾಗಿ ಅಧಿಕಾರ ಸ್ವೀಕರಿಸಿದ ಆರ್‍ಎಫ್‍ಓ ವಾನಿಶ್ರೀ ಹೆಗಡೆ ಅವರನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಸುನೀತಾ ಶ್ರೀನಾಥ್ ಕಡೋಲ್ಕರ, ಅಧಿಕಾರಿಗಳಾದ ಅಶೋಕ್ ಹೋಳಿ, ಸಿದ್ದನಾಗೇಶ್ವರ ಮಗದುಮ್ಮ, ಕುಮಾರಸ್ವಾಮಿ ಹಿರೇಮಠ, ಮಾಧುರಿ ದಳವಾಯಿ, ರತ್ನಾಕರ ಓಬನ್ನವರ, ಶಿವರುದ್ರಪ್ಪ ಕಬಾಡಗಿ ಸೇರಿದಂತೆ ಇನ್ನಿತರ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.