ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಗೋಕಾಕ್‍ನಲ್ಲಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟ, ವಿಭಾಗೀಯ ಘಟಕ ಬೆಳಗಾವಿ ಹಾಗೂ ತಾಲೂಕು ಘಟಕ ಗೋಕಾಕ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಬಸವೇಶ್ವರ ವೃತ್ತದಲ್ಲಿ ಮಾನವ ಸರ್ಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿ ತಹಶೀಲ್ದಾರ್ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು. ಕಾಯಂ ಉಪನ್ಯಾಸಕರಿಗೆ ಸರಕಾರ ನೀಡುವ ವೇತನವನ್ನು ಅತಿಥಿ ಉಪನ್ಯಾಸಕರಿಗೂ ಸಹ ನೀಡಿ ಉದ್ಯೋಗ ಭದ್ರತೆಯನ್ನು ಕಲ್ಪಿಸಬೇಕು, ಇವುಗಳನ್ನು ಉನ್ನತ ಕ್ಷಣ ಇಲಾಖೆ ಅತಿಥಿ ಉಪನ್ಯಾಸಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿ ತರಗತಿಗಳನ್ನು ಬಹಿಷ್ಕರಿಸಿ ರಾಜ್ಯಾದ್ಯಂತ ಅನಿರ್ಧಾಷ್ಠವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಸರಕಾರ ನಮ್ಮ ಬೇಡಿಕೆಗಳನ್ನು ಸಹನಾಭೂತಿಯಿಂದ ಆಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶೂನ್ಯ ಸಂಪಾದನಾ ಮಠದ ಶ್ರೀಮುರುಘರಾಜೇಂದ್ರ ಮಹಾಸ್ವಾಮಿಗಳು, ಕಪರಟ್ಟಿ ಕಳ್ಳಿಗುದ್ದಿ ಮಠದ ಶ್ರೀ ಬಸವರಾಜ ಹಿರೇಮಠ ಹಾಗೂ ಸಂಘಟನೆಯ ಸಿ ಹುಣಶ್ಯಾಳ, ಎಸ್.ಎಸ್.ಗಾಣಿಗೇರ, ವಾಯ.ಬಿ.ಕೊಪ್ಪದ, ಭೂಮನ್ನವರ, ಸಂಗರಾಜ ಕೊಪ್ಪ ಸೇರಿದಂತೆ ಗೋಕಾಕ, ಮೂಡಲಗಿ, ಪಾಶ್ಚಾಪೂರ, ಹುಕ್ಕೇರಿಯ ಅತಿಥಿ ಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.