ಸ್ವಂತ ಚಿಕ್ಕಪ್ಪನ ಮಗಳನ್ನೆ ಪ್ರೀತಿಸಿ, ಗರ್ಭಿಣಿ ಮಾಡಿ ನಂತರ ಮದುವೆ ಆಗಿರುವ ಒಂದು ಅಸಹ್ಯಕರ ಘಟನೆ ಬಿಹಾರ ರಾಜ್ಯದ ವೈಸಾಲಿ ಜಿಲ್ಲೆಯ ಭಗವಾನಪುರ ಗ್ರಾಮದಲ್ಲಿ ನಡೆದಿದೆ.

ಹೌದು ಭಗವಾನಪುರ ಗ್ರಾಮದ ಯುವಕನೊರ್ವ ಈ ರೀತಿ ಅನಾಗರಿಕ ಕೃತ್ಯಕ್ಕೆ ಮುಂದಾಗಿರುವುದು. ಕಳೆದ ಮೂರು ವರ್ಷಗಳಿಂದ ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರಂತೆ, ನಂತರ ಪ್ರೀತಿ ದೈಹಿಕ ಸಂಪರ್ಕಕ್ಕೆ ತಿರುಗಿ ಯುವತಿ ಗರ್ಭಿಣಿಯಾಗಿದ್ದಳು. ಇದಾದ ಬಳಿಕ ಇಬ್ಬರು ದೇವಸ್ಥಾನದಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಈ ವೇಳೆ ಯುವಕ ತಮ್ಮ ಮದುವೆ ಆಗಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ಮದುವೆ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದೆ.