ಬೆಳಗಾವಿಯ ಗಣಿ ಮಾಲೀಕರು ಮತ್ತು ಮಿನರಲ್ ಟ್ರೇಡ್ಸ ಅಸೊಸಿಯೇಷನ್ ಚೇರ್ಮನ್ ಕಾರಿಗೆ ಕಲ್ಲು ಎಸೆದು ಓಡಿ ಹೋಗಿರುವ ಘಟನೆ ನಡೆದಿದೆ.

ಹೌದು ಇಂದು ಬೆಳಿಗ್ಗೆ 4.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು. ಮುಸುಕುಧಾರಿ ಓರ್ವ ಶಿವಾಜಿ ನಗರದ ಶಿವಾಜಿ ಗಾರ್ಡನ್ ಎದುರಿಗೆ ಇರುವ ಗಣಿ ಮಾಲೀಕರು ಮತ್ತು ಮಿನರಲ್ ಟ್ರೇಡ್ಸ ಅಸೊಸಿಯೇಷನ್ ಚೇರ್ಮನ್ ನಿತಿನ್ ಅವರ ನಿವಾಸದ ಮುಂದೆ ನಿಲ್ಲಿಸಿದ್ದ ಕಾರ್‍ಗೆ ಕಲ್ಲು ತೂರಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಮುಸಕುಧಾರಿ ವ್ಯಕ್ತಿ ಕಾರಿನ ಹಿಂಬದಿಯ ಗ್ಲಾಸಿಗೆ ಕಲ್ಲು ತೂರಿದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೆಳಿಗ್ಗೆ ಎದ್ದು ನಿತಿನ್ ಅವರು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಶಾಹಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.