ಗಡಿಪ್ರದೇಶ ಅಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ ಹಾಗೂ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ಇವರು ಕನ್ನಡ ಹಾಗೂ ಮರಾಠಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಕುಂದು ಕೊರತೆಗಳ ಪಟ್ಟಿ ಮಾಡಿದರು.

ಜಾಂಬೋಟಿ ಶಾಲೆಗೆ ಮಕ್ಕಳು ಸುಮಾರು 5 ರಿಂದ 9 ಕಿಮೀ ನಡೆದುಕೊಂಡು ಬರುವ ಪರಿಸ್ಥಿತಿ ಇದೆ. ಬಸ್ ಇಲ್ಲ. ಕಾಡಿನ ಮಧ್ಯದ ಸಂಚಾರ ಅಪಾಯಕಾರಿ. ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ನಡೆದುಕೊಂಡೇ ಬರುತ್ತಾರೆ ಎಂದು ಮುಖ್ಯ ಶಿಕ್ಷಕರು ತಿಳಿಸಿದರು ಆಧ್ಯತೆಯ ಮೇಲೆ ಮಕ್ಕಳಿಗೆ 9 ಕಿಮೀ ನಡುಗೆ ತಪ್ಪಿಸಲು ಈ ಭಾಗದಲ್ಲಿ ವಸತಿ ನಿಲಯ, ಯೋಗ್ಯ ಶಾಲಾ ಸಂಪರ್ಕ ರಸ್ತೆ, ಕನ್ನಡ ದಿನಪತ್ರಿಕೆ ಒದಗಿಸಲು/ ಪ್ರಾರಂಭಿಸಲು ತಕ್ಷಣ ಕ್ರಮ ಕೈಗೊಳ್ಳುವ ಬಗ್ಗೆ ಆಸಕ್ತಿ ವಹಿಸುವುದಾಗಿ ತಿಳಿಸಿದರು..
ಶಾಲೆಯ ಮಕ್ಕಳೊಂದಿಗೆ ಹಾಗೂ ಶಿಕ್ಷಕರೊಂದಿಗೆ ಸಂವಾದ ಮಾಡಲಾಯಿತು. ಕಣಕುಂಬಿ ಮರಾಠಿ ಮಾಧ್ಯಮಿಕ ಶಾಲೆ, ಜಾಂಬೋಟಿ ಕನ್ನಡ ಪ್ರಾಥಮಿಕ ಶಾಲೆ. ಕಣಕುಂಬಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು.