Belagavi

ಖಾಸಗಿ ಎಪಿಎಂಸಿ ವಿರೋಧಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸ್

Share

ಬೆಳಗಾವಿ ನಗರದಲ್ಲಿ ತಲೆಎತ್ತಿರುವ ಖಾಸಗಿ ಎಪಿಎಂಸಿಯನ್ನು ರದ್ದುಗೊಳಿಸಿ ಅದು ತಲೆಎತ್ತುವಲ್ಲಿ ಅಕ್ರಮವೆಸಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿವಿಧ ರೈತ ಸಂಟನೆಗಳು ಹಾಗೂ ತರಕಾರಿ ವ್ಯಾಪಾರಸ್ಥರು ಪ್ರತಿಭಟನಾ ರ್ಯಾಲಿ ನಡೆಸಿದರು.

ಬೆಳಗಾವಿಯಲ್ಲಿ ಖಾಸಗಿ ಎಪಿಎಂಸಿ ತಲೆ ಎತ್ತಲು ಕಾರಣರಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಇಂದು ಬೆಳಗಾವಿ ನಗರದ ಸರಕಾರಿ ಎಪಿಎಂಸಿ ಆವರಣದಲ್ಲಿ ವಿವಿಧ ರೈತಪರ ಸಂಘಟನೆಗಳು ಹಾಗೂ ತರಕಾರಿ ವ್ಯಾಪಾರಸ್ಥರು ಪ್ರತಿಭಟನಾ ರ್ಯಾಲಿ ನಡೆಸಿದರು.

ಇನ್ನು ಈ ವೇಳೆ ಪ್ರತಿಭಟನಾ ರ್ಯಾಲಿ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಈ ಮೊದಲೇ ರ್ಯಾಲಿ ನಡೆಸುವಂತೆ ಜಿಲ್ಲಾಡಳಿತದಿಂದ ಅನಿಮತಿಯನ್ನು ಪಡೆದಿಲ್ಲ ಎಂದು ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ತಮ್ಮ ವಾಹನಗಳಲ್ಲಿ ಕರೆದುಕೊಂಡು ಹೋಗಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷರಾದ ಸಿದಗೌಡ ಮೋದಗಿ, ದೇಶಾದ್ಯಂತ ಖಾಸಗೀಕರಣವನ್ನು ವಿರೋಧಿಸಿ ನಡೆಯುತ್ತಿದ್ದ ಚಳುವಳಿ ಈಗ ಕರ್ನಾಟಕದಲ್ಲಿ ಮುಂದುವರೆಯುತ್ತಿದೆ. ಈಗಾಗಲೇ ಬೇರೆ ಬೇರೆ ಜಿಲ್ಲೆಗಳಿಂದ ರೈತರು ಆಗಮಿಸಿದ್ದಾರೆ. ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲ ಕಲಾಪದ ವೇಳೆ ಈ ಖಾಸಗಿಕರಣ ನೀತಿಯನ್ನು ಕೈಬಿಡುವ ಹಿನ್ನೆಯಲ್ಲಿ ಚರ್ಚೆ ಮಾಡುವಂತೆ ಸರಕಾರಕ್ಕೆ ತಿಳಿಸಲಾಗಿತ್ತು.

ಆದರೆ ಈ ವರೆಗೂ ಸರಕಾರ ಯಾವುದೇ ಚಕಾರ ಶಬ್ಧ ಎತ್ತಿಲ್ಲ. ನಾನು ಯಾವಾಗಲೂ ರೈತರ ಪರವಾಗಿ ಕಾರ್ಯ ಮಾಡುತ್ತೇನೆ. ಹಗಾಗಿ ಮುಂಬರುವ ಸಿನಗಳಲ್ಲಿ ನೀವು ನನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು. ಇನ್ನು ಈ ಕುರಿತಂತೆ ಚರ್ಚೆ ನಡೆಸಲು ಜಿಲ್ಲಾಧಿಕಾರಿಗಳು ಸಾಯಂಕಾಲ ಸಭೆ ಕರೆದಿದ್ದಾರೆ. ಕೊವಿಡ್ ಹಿನ್ನೆಲೆಯಲ್ಲಿ ಹೋರಾಟಗಾರರು ಸಹಕರಿಸಬೇಕೆಂದು ಮನವಿ ಮಾಡಿದರು.

ಬೆಳಗಾವಿಯಲ್ಲಿ ಪ್ರಾರಂಭವಾದ ಖಾಸಗಿ ಎಪಿಎಂಸಿ ವಿರುದ್ಧ ರೈತರು ಹಾಗೂ ಸರಕಾರಿ ಎಪಿಎಂಸಿ ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ರಾಜ್ಯಾದ್ಯಂತ ಸರಕಾರದ ಈ ಖಾಸಗೀಕರಣ ನೀತಿಗೆ ತೀವೃ ವಿರೋಧ ವ್ಯಕ್ತವಾಗಿದೆ. ಇನ್ನು ಸರಕಾರ ಈ ವಿಚಾರ ಕುರಿತಂತೆ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.

Tags:

error: Content is protected !!