COVID-19

ಖಾನಾಪುರದಲ್ಲಿ ಫ್ರಂಟ್‍ಲೈನ್ ವಾರಿಯರ್ಸಗೆ ಬೂಸ್ಟರ್ ಡೋಸ್ ಅಭಿಯಾನ ಆರಂಭ

Share

ಖಾನಾಪೂರದಲ್ಲಿ ಫ್ರಂಟ ಲೈನ್ ವಾರಿಯರ್ಸ್ ಸೇರಿದಂತೆ ಹಿರಿಯ ನಾಗರೀಕರಿಗೆ ಬೂಸ್ಟರ್ ಡೋಸ್ ನೀಡುವ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ.

ಹೌದು ರಾಜ್ಯಾಧ್ಯಂತ ಫ್ರಂಟ ಲೈನ್ ವಾರಿಯರ್ಸ್ ಸೇರಿದಂತೆ ಹಿರಿಯ ನಾಗರೀಕರಿಗೆ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮ ಆರಂಭವಾಗಿದೆ. ಅದೇ ರೀತಿ ಖಾನಾಪುರದಲ್ಲಿಯೂ ಸೋಮವಾರ ಚಾಲನೆ ನೀಡಲಾಯಿತು. ಕೊರೊನಾ ವಾರಿಯರ್ಸ ಮತ್ತು ಹಿರಿಯ ನಾಗರಿಕರು ಆಗಮಿಸಿ ಬೂಸ್ಟರ್ ಡೋಸ್ ತೆಗೆದುಕೊಂಡರು. ಈ ಸಂಬಂಧ ಮಾತನಾಡಿದ ಟಿಎಚ್‍ಓ ಡಾ.ಸಂಜಯ್ ನಾಂದ್ರೆ ಅವರು ಇಂದಿನಿಂದ ಪ್ರಂಟ ಲೈನ್ ವಾರಿಯರ್ಸ್‍ಗಳಿಗೆ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದ್ದು, 60 ವರ್ಷಮೇಲ್ಪಟವರು ತಮ್ಮ ಎರಡನೇ ಡೋಸ್ ಪಡೆದು 9 ತಿಂಗಳ ಬಳಿಕ ಈ ಬೂಸ್ಟರ್ ಡೋಸ್‍ನ್ನು ಪಡೆದುಕೊಳ್ಳಬಹುದು ಎಂದು ಮನವಿ ಮಾಡಿಕೊಂಡರು.

ಒಟ್ಟಿನಲ್ಲಿ 3ನೇ ಅಲೆ ತನ್ನ ಆರ್ಭಟ ಆರಂಭಿಸಿದ್ದ ಅರ್ಹರು ಆದಷ್ಟು ಬೇಗನೇ ಬೂಸ್ಟರ್ ಡೋಸ್ ತೆಗೆದುಕೊಳ್ಳುವ ಅವಶ್ಯಕತೆಯಿದೆ.

 

Tags:

error: Content is protected !!